ಚಳಿಗಾಲದಲ್ಲಿ ಕೇಸರಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ. ಕೇಸರಿ ಸೇವನೆಯಿಂದ ಒತ್ತಡವೂ ದೂರವಾಗುತ್ತದೆ. ಗರ್ಭಿಣಿಯರಿಗೆ ಕೇಸರಿ ಹಾಲು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಕೇಸರಿ ಹಾಲಿನ ಸೇವನೆಯಿಂದ ಮಗುವಿಗೆ ಸಾಕಷ್ಟು ಅನುಕೂಲಗಳಿವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಮೂಡ್ ಸ್ವಿಂಗ್ ಹೆಚ್ಚು. ಕೇಸರಿ ಸೇವನೆಯಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿ.
ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಸೇವನೆಯ ಪ್ರಯೋಜನಗಳು…
1. ಗರ್ಭಾವಸ್ಥೆಯಲ್ಲಿ ಮಹಿಳೆಯರ ಹೃದಯ ಬಡಿತದಲ್ಲಿ ತ್ವರಿತ ಹೆಚ್ಚಳ ಕಂಡುಬರುತ್ತದೆ. ಬಿಪಿ ಕೂಡ ವೇಗವಾಗಿ ಏರುತ್ತದೆ ಮತ್ತು ಕಡಿಮೆಯಾಗುತ್ತದೆ. ಕೇಸರಿ ಹಾಲು ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಏಕೆಂದರೆ ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಕ್ರೋಸೆಟಿನ್ ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
2. ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಅನೇಕ ರೀತಿಯ ಹಾರ್ಮೋನ್ ಬದಲಾವಣೆಗಳು ಸಂಭವಿಸುತ್ತವೆ. ಈ ಕಾರಣದಿಂದಾಗಿ ಅವರ ಮನಸ್ಥಿತಿ ಮತ್ತು ಭಾವನೆಗಳಲ್ಲಿ ತ್ವರಿತ ಬದಲಾವಣೆಗಳು ಕಂಡುಬರುತ್ತವೆ. ಇದು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಮೆದುಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಕೇಸರಿ ಪ್ರಯೋಜನಕಾರಿ. ಖಿನ್ನತೆ ಶಮನಕಾರಿಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರು ಬೆಳಗಿನ ಬೇನೆ ಎದುರಿಸುತ್ತಾರೆ. ತಲೆತಿರುಗುವಿಕೆ, ವಾಂತಿ ಇವೆಲ್ಲವೂ ಕಾಡುತ್ತವೆ.
ಬೆಳಗ್ಗೆ ದೇಹದಲ್ಲಿ ಸಾಕಷ್ಟು ಶಕ್ತಿಯ ಕೊರತೆ ಇರುತ್ತದೆ ಮತ್ತು ಅನೇಕ ಬಾರಿ ಮಹಿಳೆಯರು ಸುಸ್ತಾಗುತ್ತಾರೆ. ಕೇಸರಿ ಹಾಲು ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ನಕಲಿ ಕೇಸರಿ ಕೂಡ ಬರುತ್ತಿದೆ. ಅವುಗಳ ಬಳಕೆಯು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಅಸಲಿ ಮತ್ತು ಶುದ್ಧ ಕೇಸರಿಯನ್ನು ಮಾತ್ರ ಗರ್ಭಿಣಿಯರು ಬಳಸಬೇಕು.