ಗರ್ಭಿಣಿಯರು ಕಿವಿ ಹಣ್ಣು ತಿನ್ನುವುದು ಉತ್ತಮ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…?
ಈ ಹಣ್ಣಿನಲ್ಲಿ ಪೊಟ್ಯಾಷಿಯಂ, ಮೆಗ್ನಿಶಿಯಮ್, ಫೈಬರ್, ಫೋಲಿಕ್ ಆಸಿಡ್, ವಿಟಮಿನ್ ಇ ಮತ್ತು ವಿಟಮಿನ್ ಸಿ ಅಧಿಕವಾಗಿ ಇರುತ್ತದೆ. ಆದ್ದರಿಂದ ಗರ್ಭಧಾರಣೆ ಅವಧಿಯಲ್ಲಿ ಈ ಹಣ್ಣನ್ನು ತಿನ್ನುವುದು ಬಹಳ ಒಳ್ಳೆಯದು. ಅಸ್ತಮಾ ಇದ್ದವರಿಗೆ, ಚಿಕ್ಕ ಮಕ್ಕಳು ಈ ಹಣ್ಣನ್ನು ತಿನ್ನುವುದರಿಂದ ಉಬ್ಬಸ ಕಡಿಮೆಯಾಗುತ್ತದೆ ಮತ್ತು ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ರೋಗ ನಿರೋಧಕ ಶಕ್ತಿಯನ್ನು ಕೂಡ ಇದು ಹೆಚ್ಚಿಸುತ್ತದೆ, ಗರ್ಭಧಾರಣೆ ಸಮಯದಲ್ಲಿ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.
ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ದೃಷ್ಟಿ ದೋಷ ನಿವಾರಣೆಯಾಗುತ್ತದೆ. ವಾರದಲ್ಲಿ 3 ರಿಂದ 4 ಕಿವೀ ಫ್ರೂಟ್ ತಿನ್ನಿ, ಇದರಿಂದ ಹುಟ್ಟುವ ಮಗುವಿಗೆ ಯಾವುದೇ ರೀತಿಯ ಆರೋಗ್ಯ ತೊಂದರೆ ಇರುವುದಿಲ್ಲ.