
ಗರ್ಭಿಣಿಯರು ಹೆರಿಗೆ ದಿನಗಳು ಸಮೀಪ ಬರುತ್ತಿದ್ದ ಹಾಗೇ ತುಂಬಾ ಎಚ್ಚರ ವಹಿಸಬೇಕು. ಇಲ್ಲವಾದರೆ ತಾಯಿ ಹಾಗೂ ಮಗುವಿನ ಜೀವಕ್ಕೆ ಅಪಾಯವಾಗುವ ಸಂಭವವಿರುತ್ತದೆ. ಗರ್ಭಿಣಿಯರು ಹೆರಿಗೆಯಾಗುವ ಸೂಚನೆಗಳು ಸಿಕ್ಕಾಗ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಯೊಂದಿಗೆ ಹೆರಿಗೆಯಾದರೆ ತುಂಬಾ ಒಳ್ಳೆಯದು. ಹಾಗಾಗಿ ಗರ್ಭಿಣಿಯರು ಹೆರಿಗೆ ಆಗುವ ಮೊದಲು ಸಿಗುವಂತಹ ಈ ಸೂಚನೆಗಳನ್ನು ತಿಳಿದುಕೊಳ್ಳಿ.
*ಗರ್ಭಿಣಿಯರಿಗೆ ಹೆರಿಗೆ ದಿನಗಳು ಹತ್ತಿರ ಬರುತ್ತಿದ್ದ ಹಾಗೇ ಕೆಳಬೆನ್ನು, ತೊಡೆ ಸಂದುಗಳಲ್ಲಿ ಸೆಳೆತ, ನೋವು ಕಾಣಿಸಿಕೊಳ್ಳುತ್ತದೆ.
* ಹೆರಿಗೆ ದಿನಗಳು ಹತ್ತಿರ ಬರುತ್ತಿರುವಾಗ ಗರ್ಭಾಶಯದಲ್ಲಿ ಮಾತ್ರವಲ್ಲ ಗುದನಾಳಗಳಲ್ಲಿ ಬದಲಾವಣೆಗಳಾಗುತ್ತದೆ. ಇದು ಅತಿಸಾರಕ್ಕೆ ಕಾರಣವಾಗಬಹುದು.
*ಗರ್ಭಾಶಯವನ್ನು ಹೊರಗಿನ ಪ್ರಪಂಚದಿಂದ ಮುಚ್ಚಲು ಲೋಳೆ ಪದರವಿರುತ್ತದೆ. ಹೆರಿಗೆ ದಿನಗಳು ಸಮೀಪ ಬರುತ್ತಿದ್ದ ಹಾಗೇ ಈ ಲೋಳೆ ಅಂಶ ಹೊರಗೆ ಬರಲು ಶುರುವಾಗುತ್ತದೆ.
*ನಿಮ್ಮ ಯೋನಿ ಡಿಸ್ಚಾರ್ಜ್ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಅದು ದಪ್ಪವಾಗಿರುತ್ತದೆ.
*ಹೆರಿಗೆಗೆ ಕೆಲವೇ ಸಮಯವಿರುವಾಗ ಯೋನಿಯಿಂದ ನೀರು ಹೊರಗೆ ಬರುತ್ತದೆ. ಸಾಮಾನ್ಯವಾಗಿ ಇದು ಎಲ್ಲಾ ಗರ್ಭಿಣಿಯರಲ್ಲೂ ಕಂಡುಬರುತ್ತದೆ.