ಅಮೆರಿಕದ ಸುಪ್ರೀಂ ಕೋರ್ಟ್ 1973ರ ಗರ್ಭಪಾತಕ್ಕೆ ಸಂಬಂಧಿಸಿದ ತೀರ್ಪನ್ನು ರದ್ದುಗೊಳಿಸಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅಮೆರಿಕನ್ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಅನೇಕ ರಾಜ್ಯಗಳು ಗರ್ಭಪಾತವನ್ನು ನಿಷೇಧಿಸುವ ಅಥವಾ ತೀವ್ರವಾಗಿ ಸೀಮಿತಗೊಳಿಸುವ ತಮ್ಮದೇ ಆದ ಕಾನೂನುಗಳನ್ನು ತರುತ್ತಿವೆ.
ಟೆಕ್ಸಾಸ್‌ನಲ್ಲಿ ಗರ್ಭಿಣಿಯೊಬ್ಬಳು ತನ್ನ ಜೀವಕ್ಕೇ ಅಪಾಯ ಉಂಟು ಮಾಡ್ತಿರೋ ಸೋಂಕಿನಿಂದ ಪಾರಾಗಲು ತನ್ನದೇ ವಜೈನಲ್ ಡಿಸ್ಚಾರ್ಜ್ ಅನ್ನು ಆಸ್ಪತ್ರೆಗೆ ತಂದಿದ್ದಾಳೆ. 1973ರ ತೀರ್ಪು ರದ್ದಾಗುವ ಮುನ್ನ ಅಂದ್ರೆ ಮೇ ತಿಂಗಳಿನಲ್ಲೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
26 ವರ್ಷದ ಎಲಿಜಬೆತ್ ಎಂಬ ಮಹಿಳೆ ತನಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾಳೆ. ಕೆಲವೊಮ್ಮೆ ಅಪಾಯಕಾರಿ ಗರ್ಭಾವಸ್ಥೆಗಳು ಮಹಿಳೆಯರ ಜೀವಕ್ಕೇ ಅಪಾಯ ಉಂಟುಮಾಡುತ್ತವೆ. ಅಂತಹ ಸಮಯದಲ್ಲಿ ಗರ್ಭಪಾತ ಅನಿವಾರ್ಯ ಅಂತಾ ಆಕೆ ಹೇಳಿದ್ದಾಳೆ.
ಎಲಿಜಬೆತ್ 18 ವಾರಗಳ ಗರ್ಭಿಣಿಯಾಗಿದ್ದಳು. ದಿಢೀರನೆ ಆಕೆಯ ಗರ್ಭಾಶಯದಿಂದ ನೀರು ಸೋರಿಕೆಯಾಗಿದೆ. ಗರ್ಭದೊಳಗಿದ್ದ ಮಗು ಉಳಿಯುವುದು ಅನುಮಾನ ಅಂತಾ ವೈದ್ಯರು ಹೇಳಿದ್ದರು. ಮಗುವಿಗೆ ಹಾರ್ಟ್ ಬೀಟ್ ಕೂಡ ಇತ್ತು. ಆದ್ರೆ ಎಲಿಜಬೆತ್ ಮಾರಣಾಂತಿಕ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿತ್ತು. ಗರ್ಭಪಾತ ನಿಷೇಧ ಕಾನೂನು ಜಾರಿಯಲ್ಲಿದ್ದಿದ್ದರಿಂದ ವೈದ್ಯರು ಅಬಾರ್ಶನ್ ಮಾಡುವಂತಿರಲಿಲ್ಲ.
ಟೆಕ್ಸಾಸ್ ಕಾನೂನು ಅನುಮತಿಸಿದಂತೆ “ವೈದ್ಯಕೀಯ ತುರ್ತುಸ್ಥಿತಿ” ಎಂದು ಅರ್ಹತೆ ಪಡೆಯುವಷ್ಟು ಅನಾರೋಗ್ಯಕ್ಕೆ ಒಳಗಾಗುವವರೆಗೂ ಆಸ್ಪತ್ರೆಯಲ್ಲಿರುವಂತೆ ಮಹಿಳೆಗೆ ಸೂಚಿಸಲಾಯ್ತು. ಅಥವಾ ಹಾಗೆಯೇ ಮನೆಗೆ ತೆರಳಬಹುದು, ಭ್ರೂಣವು ಸಾಯುವವರೆಗೆ ಆಸ್ಪತ್ರೆಯಲ್ಲೇ ಕಾಯಬಹುದೆಂದು ಹೇಳಿದ್ದರು. ಈ ಕಾನೂನು ತೊಡಕನ್ನು ನಿವಾರಿಸಿಕೊಂಡು ತನ್ನ ಜೀವ ಉಳಿಸಿಕೊಳ್ಳಲು ಆ ಮಹಿಳೆ ತನ್ನದೇ ವಜೈನಲ್ ಡಿಸ್ಚಾರ್ಜ್ ಅನ್ನು ಆಸ್ಪತ್ರೆಗೆ ಕೊಂಡೊಯ್ದು, ತನ್ನ ಸ್ಥಿತಿ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ಸಾಬೀತುಪಡಿಸಿ, ಗರ್ಭಪಾತಕ್ಕೆ ಅನುಮತಿ ಪಡೆದುಕೊಂಡಿದ್ದಾಳೆ.