ನಿಂಬೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆನೋವು, ವಾಕರಿಕೆಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಇರುವುದರಿಂದ ಆ ವೇಳೆ ನಿಂಬೆ ರಸ ಬಳಸಬಹುದೇ? ಇದಕ್ಕೆ ಉತ್ತರ ಇಲ್ಲಿದೆ.
ನಿಂಬೆರಸದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಸತು, ರಂಜಕ, ವಿಟಮಿನ್ ಎ, ಬಿ, ಸಿಮತ್ತು ಇ ಅಧಿಕವಾಗಿರುತ್ತದೆ. ಆದಕಾರಣ ಗರ್ಭಿಣಿಯರು ನಿಂಬೆ ಹಣ್ಣಿನ ಪಾನಕ ಸೇವಿಸಿದರೆ ಒಳ್ಳೆಯದು. ಆದರೆ ಮಿತವಾಗಿ ಸೇವಿಸಬೇಕು. ಅವರಿಗೆ ಬೇಕಾದ ಪೋಷಕಾಂಶಗಳು ಇದರಿಂದ ಸಿಗುತ್ತದೆ.
ಅಲ್ಲದೇ ಗರ್ಭಿಣಿಯರು ನಿಂಬೆ ಹಣ್ಣನ್ನು ಸೇವಿಸುವುದರಿಂದ ವಾಕರಿಕೆ ನಿವಾರಣೆಯಾಗುತ್ತದೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಗರ್ಭಿಣಿಯರಲ್ಲಿ ಕಾಡುವ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಹಾಗೇ ನಿಂಬೆ ಹಣ್ಣಿನಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಜ್ವರ, ಶೀತ, ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಇತರ ಸೋಂಕುಗಳು ಬರದಂತೆ ತಡೆಯುತ್ತದೆ.