ಗರ್ಭಾವಸ್ಥೆಯಲ್ಲಿ ಅತಿ ಹೆಚ್ಚು ನೀರನ್ನು ಕುಡಿಯಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆಯಂತೆ. ಹಾಗಾದ್ರೆ ಗರ್ಭಿಣಿಯರು ಅತಿ ಹೆಚ್ಚು ನೀರನ್ನು ಕುಡಿದರೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.
*ಗರ್ಭಾವಸ್ಥೆಯಲ್ಲಿ ಸರಿಯಾಗಿ ನೀರನ್ನು ಸೇವಿಸಿದರೆ ತಾಯಿಯ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.
* ಗರ್ಭದಲ್ಲಿರುವ ಮಗು ಸುರಕ್ಷಿತವಾಗಿರಲು ಗರ್ಭದ ನೀರು ಅತಿ ಅವಶ್ಯಕ. ಮಗುವನ್ನು ಸುತ್ತುವರಿದಿರುವ ಈ ಗರ್ಭದ ನೀರು ಸರಿಯಾದ ಪ್ರಮಾಣದಲ್ಲಿದ್ದರೆ ಮಗುವಿನ ಬೆಳವಣಿಗೆ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ.
* ಗರ್ಭಿಣಿಯರು ಸರಿಯಾಗಿ ನೀರನ್ನು ಸೇವಿಸಿದರೆ ಮೂತ್ರದ ಸೋಂಕು, ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ ದೂರವಾಗುತ್ತದೆ. ದೇಹದಲ್ಲಿರುವ ಕಲ್ಮಶಗಳು ಹೊರಹೋಗಿ ಆರೋಗ್ಯ ಚೆನ್ನಾಗಿರುತ್ತದೆ.
*ಗರ್ಭಾವಸ್ಥೆಯಲ್ಲಿ ಸರಿಯಾಗಿ ನೀರನ್ನು ಕುಡಿದರೆ ಮಲಬದ್ಧತೆ, ಆಮ್ಲಿಯತೆ ಸಮಸ್ಯೆ ನಿವಾರಣೆಯಾಗುತ್ತದೆ.