ಗರ್ಭಾವಸ್ಥೆಯಲ್ಲಿ ಹಾಗೂ ಒಂದು ವರ್ಷದವರೆಗೆ ಕುಟುಂಬದ ವಾತಾವರಣ ಮಗುವಿನ ಭಾವನಾತ್ಮಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಸಂಶೋಧನೆ ಈ ವಿಷಯವನ್ನು ದೃಢಪಡಿಸಿದೆ. ಸಂಶೋಧನೆ ಪ್ರಕಾರ ಮಗುವಿನ ಭಾವನಾತ್ಮಕ ವಿಕಾಸ ತಾಯಿ, ಮಗುವಿನ ಸಂಬಂಧದ ಜೊತೆಗೆ ಕುಟುಂಬದ ಪ್ರಾಮುಖ್ಯತೆಯನ್ನು ಬಹಿರಂಗಪಡಿಸಿದೆ.
ಅಧ್ಯಯನದಲ್ಲಿ ಮಕ್ಕಳು ಕುಟುಂಬದ ವಾತಾವರಣಕ್ಕೆ ತಕ್ಕಂತೆ ತಮ್ಮ ಭಾವನಾತ್ಮಕ ತಂತ್ರಗಳನ್ನು ಅಭಿವೃದ್ಧಿಪಡಿಸಿಕೊಳ್ತಾರೆ ಎಂಬ ಅಂಶ ಹೊರಬಿದ್ದಿದೆ. ತಂದೆ, ತಾಯಿ ಸಮಸ್ಯೆಗಳನ್ನು ಹೇಗೆ ಬಿಡಿಸುತ್ತಾರೆಯೋ ಹಾಗೆಯೇ ಮಕ್ಕಳು ಕೂಡ ತೊಡಕುಗಳನ್ನು ಬಿಡಿಸಲು ಕಲಿಯುತ್ತಾರೆ. ತಂದೆ, ತಾಯಿಯ ವೈವಾಹಿಕ ಸಂಬಂಧ, ಮಗು ಜನನದ ಮೊದಲ ದಿನದಿಂದ ತಂದೆಯ ಪ್ರೀತಿ ಈ ಎಲ್ಲವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯಂತೆ.