ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ.
2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಉರಿ ಮೂತ್ರ, ರಕ್ತಸ್ರಾವ ಕಡಿಮೆಯಾಗುತ್ತದೆ.
ಕಣ್ಣು ನೋವು, ಉರಿ ಹಾಗೂ ಸೊಂಕು ಇದ್ದಲ್ಲಿ ಗರಿಕೆಯನ್ನು ನೀರಿನಲ್ಲಿ ಅರೆದು ಕಣ್ಣಿನ ರೆಪ್ಪೆಯ ಮೇಲೆ ಲೇಪಿಸಿ ನಂತರ ತೊಳೆಯಿರಿ. ಇದರಿಂದ ನೋವು ಬಾವು ಕಡಿಮೆಯಾಗುತ್ತದೆ.
ಅರ್ಧ ಹಿಡಿ ಗರಿಕೆ ಬೇರಿಗೆ ನಾಲ್ಕು ಭಾಗ ನೀರು ಬೆರೆಸಿ ಕಷಾಯ ಮಾಡಿ ಜೇನು ತುಪ್ಪದ ಜೊತೆ ಸೇವಿಸಿದರೆ ಚರ್ಮ ರೋಗ, ಮೂತ್ರ ದೋಷ, ರಕ್ತ ದೋಷ ಗುಣವಾಗುತ್ತದೆ.
10ಮಿಲಿ ಗ್ರಾಂ ಗರಿಕೆ ರಸಕ್ಕೆ ಜೇನುತುಪ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಎಲ್ಲಾ ವಿಧದ ಅಲರ್ಜಿ ಕಡಿಮೆಯಾಗುತ್ತದೆ. ಗರಿಕೆ ಸೊಪ್ಪಿನ ರಸವನ್ನು ತಲೆಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಮೂಗಿನಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವನ್ನು ಬೇಗನೆ ತಡೆಗಟ್ಟಲು ನಿಯಮಿತ ಪ್ರಮಾಣದಲ್ಲಿ ಗರಿಕೆ ರಸವನ್ನು ಮೂಗಿಗೆ ಹಾಕಬೇಕು. ಇದರಿಂದ ಆರೋಗ್ಯವೂ ಸುಧಾರಣೆಯಾಗುತ್ತದೆ.