2 ಕಪ್ ಓಟ್ಸ್
1 ಕಪ್ ಉದ್ದಿನ ಹಿಟ್ಟು
½ ಕಪ್ ಮೊಸರು
ರುಚಿಗೆ ತಕ್ಕಷ್ಟು ಉಪ್ಪು
ಬೇಯಿಸಿದ ನಾಲ್ಕು ಆಲೂಗಡ್ಡೆ
¼ ಕಪ್ ಬಟಾಣಿ ಕಾಳು
ಸ್ವಲ್ಪ ಹಸಿರು ಕೊತ್ತಂಬರಿ (ಕತ್ತರಿಸಿದ)
4 ಹಸಿರು ಮೆಣಸಿನಕಾಯಿ (ಕತ್ತರಿಸಿದ)
1 ಟೀಸ್ಪೂನ್ ಶುಂಠಿಯ ಪೇಸ್ಟ್
1/4 ಟೀಸ್ಪೂನ್ ಸಾಸಿವೆ
1/4 ಟೀಸ್ಪೂನ್ ಅರಿಶಿನ ಪುಡಿ
1/4 ಟೀಸ್ಪೂನ್ ಜಿರಿಗೆ
1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
¼ ಟೀಸ್ಪೂನ್ ಕಡಲೆ ಬೇಳೆ
¼ ಟೀಸ್ಪೂನ್ ಉದ್ದಿನ ಬೇಳೆ
ಹಿಂಗು ಸ್ವಲ್ಪ
ಮಸಾಲಾ ಓಟ್ಸ್ ದೋಸೆ ಮಾಡುವ ವಿಧಾನ :
ಮೊದಲು ಓಟ್ಸ್ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಮೊಸರು, ಉದ್ದಿನ ಹಿಟ್ಟನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಕಾಯಿ, ಶುಂಠಿ ಪೇಸ್ಟ್, ಜಿರಿಗೆ, ಕೊತ್ತಂಬರಿ ಸೊಪ್ಪು, ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಸಿದ್ಧಪಡಿಸಿಕೊಳ್ಳಿ.
ಇನ್ನೊಂದು ಪ್ಯಾನ್ ಗೆ ಬೆಣ್ಣೆ ಹಾಕಿ, ಬಿಸಿಯಾದ್ಮೇಲೆ ಸಾಸಿವೆ, ಜಿರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಿಂಗು, ಮೆಣಸಿನಕಾಯಿ ಹಾಕಿ. ನಂತ್ರ ಈರುಳ್ಳಿ, ಶುಂಠಿ ಪೇಸ್ಟ್ ಹಾಕಿ. ಚೆನ್ನಾಗಿ ಮಿಕ್ಸ್ ಆದ್ಮೇಲೆ ಅರಿಶಿನ ಹಾಗೂ ಉಪ್ಪನ್ನು ಹಾಕಿ. ಕೊನೆಯಲ್ಲಿ ಬೇಯಿಸಿದ ಆಲೂಗಡ್ಡೆ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ದೋಸೆ ತವಾ ಬಿಸಿ ಮಾಡಿ, ದೋಸೆ ಹಿಟ್ಟನ್ನು ಅದ್ರ ಮೇಲೆ ಹಾಕಿ. ಸ್ವಲ್ಪ ಎಣ್ಣೆ ಹಾಕಿ, ದೋಸೆ ಬೇಯುತ್ತಿದ್ದಂತೆ ಸಿದ್ಧಪಡಿಸಿಟ್ಟ ಆಲೂಗಡ್ಡೆ ಪಲ್ಯವನ್ನು ಅದ್ರ ಮೇಲಿಟ್ಟು ರೋಲ್ ಮಾಡಿ ತವಾದಿಂದ ತೆಗೆಯಿರಿ.