ದೇಶದ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ. ತನ್ನ ಎಸ್.ಬಿ.ಐ. ವಿಕೇರ್ ಯೋಜನೆಯನ್ನು ಮಾರ್ಚ್ 31, 2022 ರ ವರೆಗೆ ವಿಸ್ತರಿಸಿದೆ.
ಹಿರಿಯ ನಾಗರಿಕರಿಗೆಂದು ರೀಟೇಲ್ ಟಿಡಿ ಕ್ಷೇತ್ರದಲ್ಲಿ ವಿಶೇಷವಾಗಿ ಪರಿಚಯಿಸಲಾದ ’ವಿಕೇರ್’ ಜಮಾ ಯೋಜನೆಯು ಹೆಚ್ಚುವರಿ ಪ್ರೀಮಿಯಂ ಆಗಿ 30 ಮೂಲಾಂಶಗಳನ್ನು (ಅದಾಗಲೇ ಚಾಲ್ತಿಯಲ್ಲಿರುವ 50 ಮೂಲಾಂಶಗಳ ಮೇಲೆ) ಐದು ವರ್ಷಗಳ ಮೇಲ್ಪಟ್ಟ ಅವಧಿಗೆ ನೀಡಲಿದೆ. ಇದೀಗ ಎಸ್.ಬಿ.ಐ. ’ವಿಕೇರ್’ ಜಮಾ ಯೋಜನೆ ಮಾರ್ಚ್ 31, 2022 ರ ವರೆಗೆ ವಿಸ್ತರಣೆಯಾಗಿದೆ.
ಎಸ್.ಬಿ.ಐ. ಸಿಬ್ಬಂದಿ ಹಾಗೂ ಪಿಂಚಣಿದಾರರಿಗೆ ಪಾವತಿ ಮಾಡಬಹುದಾದ ಬಡ್ಡಿದರವು ಅನ್ವಯದಲ್ಲಿರುವ ದರಕ್ಕಿಂತ 1 ಪ್ರತಿಶತದಷ್ಟು ಹೆಚ್ಚಿದೆ. 60 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರಿಗೆ ಎಸ್.ಬಿ.ಐ. ವೀಕೇರ್ ಮೂಲಕ 0.50 ಪ್ರತಿಶತದಷ್ಟು ಹೆಚ್ಚುವರಿಯಾಗಿ ಬಡ್ಡಿದರ ನೀಡಲಾಗುವುದು.
ಆದರೆ, ಸಿಬ್ಬಂದಿಯ, ದೇಶೀ ರೀಟೇಲ್ ಜಮಾವಣೆಯ ಎನ್.ಆರ್.ಓ. ಜಮಾವಣೆಗಳ ಮೇಲೆ ಹೆಚ್ಚುವರಿ 1 ಪ್ರತಿಶತ ಬಡ್ಡಿದರ ಅನ್ವಯವಾಗುವುದಿಲ್ಲ ಹಾಗೂ ಈ ಬಡ್ಡಿದರಗಳನ್ನು ದೇಶೀ ಟರ್ಮ್ ಜಮಾವಣೆಗಳ ಮೇಲೆ ಸಹಕಾರಿ ಬ್ಯಾಂಕ್‌ಗಳಲ್ಲಿ ಲಭ್ಯವಿರಲಿದೆ ಎಂದು ಎಸ್.ಬಿ.ಐ. ತಿಳಿಸಿದೆ.