alex Certify ಗಮನಿಸಿ: ಹಳೆ ಆಭರಣ ಮಾರಾಟ ಮಾಡಲು ಮುಂದಾಗುವವರಿಗೆ ಅನ್ವಯವಾಗುತ್ತೆ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಹಳೆ ಆಭರಣ ಮಾರಾಟ ಮಾಡಲು ಮುಂದಾಗುವವರಿಗೆ ಅನ್ವಯವಾಗುತ್ತೆ ಈ ನಿಯಮ

ಹಳೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಮುಂದಾಗುವರಿಗೆ ಹಾಗೂ ಖರೀದಿಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಹಳೆ ಆಭರಣ ಮಾರಾಟ ಮಾಡಿದವರಿಗೆ ನಗದು ರೂಪದಲ್ಲಿ ಹಣ ನೀಡುವಂತಿಲ್ಲ ಎಂದು ತಿಳಿಸಲಾಗಿದೆ.

ಈ ಗ್ರಾಹಕರಿಗೆ ಬ್ಯಾಂಕ್ ಖಾತೆ ಮೂಲಕವೇ ಅವರ ಖಾತೆಗೆ ಹಣ ವರ್ಗಾವಣೆ ಮಾಡುವುದನ್ನು ಅಥವಾ ಚೆಕ್ ಮೂಲಕ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 2 ಲಕ್ಷ ರೂಪಾಯಿಗಳು ಮೇಲ್ಪಟ್ಟ ಆಭರಣಗಳಿಗೆ ಯಾವುದೇ ಕಾರಣಕ್ಕೂ ನಗದು ನೀಡುವಂತಿಲ್ಲ ಎಂದು ತಿಳಿಸಲಾಗಿದೆ.

ಕಳ್ಳರು ಕದ್ದು ತಂದು ಮಾರುವ ಆಭರಣಗಳಿಗೆ ಕಡಿವಾಣ ಹಾಕಲು ಹಾಗೂ ಹಳೆ ಚಿನ್ನದ ಕುರಿತು ಮಾಹಿತಿ ತಿಳಿದುಕೊಳ್ಳಲು ಈ ನಿಯಮವನ್ನು ಜಾರಿಗೊಳಿಸಲಾಗಿದ್ದು, ಚಿನ್ನಾಭರಣ ವ್ಯಾಪಾರಿಗಳು ಅಥವಾ ಗ್ರಾಹಕರು ಈ ನಿಯಮವನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಅಥವಾ ದಂಡವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಚಿನ್ನದ ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿ ವ್ಯಾಪಾರ ವಹಿವಾಟು ನಡೆಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...