ಶಿರಾಡಿ ಘಾಟ್ ನಲ್ಲಿ ಈವರೆಗೆ ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಮಾತ್ರ ಪ್ರಯಾಣಿಕ ಬಸ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ರಾತ್ರಿ ವೇಳೆಯಲ್ಲೂ ಎಲ್ಲ ರೀತಿಯ ಪ್ರಯಾಣಿಕ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಗುರುವಾರದಂದು ಹಾಸನ ಜಿಲ್ಲಾಡಳಿತ ಈ ಕುರಿತ ಆದೇಶ ಹೊರಡಿಸಿದ್ದು, ಮಡಿಕೇರಿ – ಸಂಪಾಂಜೆ ನಡುವಿನ ಕೊಯನಾಡಿನಲ್ಲಿ ಹೆದ್ದಾರಿ ಬಿರುಕು ಬಿಟ್ಟು ವಾಹನ ಸಂಚಾರಕ್ಕೆ ಸುರಕ್ಷಿತವಾಗದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಮೊದಲು ಶಿರಾಡಿ ಘಾಟ್ ನ ಮಾರನಹಳ್ಳಿ ಬಳಿ, ಭೂಕುಸಿತವಾದ ಕಾರಣ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ ತಾತ್ಕಾಲಿಕ ದುರಸ್ತಿ ಕೈಗೊಂಡು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪ್ರಯಾಣಿಕ ಬಸ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ರಾತ್ರಿ ವೇಳೆಯಲ್ಲೂ ಪ್ರಯಾಣಿಕ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.