ಕೇಂದ್ರ ಚುನಾವಣಾ ಆಯೋಗದ ವತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ವಿಳಾಸ ಬದಲಾವಣೆ, ತಿದ್ದುಪಡಿ, ಹೆಸರು ತೆಗೆಸಲು ಹಾಗೂ ಸೇರ್ಪಡೆಗೆ ಅವಕಾಶವಿದ್ದು, ಈ ಕಾರ್ಯ ನವೆಂಬರ್ 11 ರಿಂದ ಈಗಾಗಲೇ ಆರಂಭವಾಗಿದೆ.
ನವೆಂಬರ್ 20, ಡಿಸೆಂಬರ್ 3 ಹಾಗೂ ಡಿಸೆಂಬರ್ 4ರಂದು ವಿಶೇಷ ನೋಂದಣಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಮತಗಟ್ಟೆಗೆ ಭೇಟಿ ನೀಡುವ ಮೂಲಕ ಅಥವಾ ಸ್ವತಃ ಚುನಾವಣಾ ಶಾಖೆಯ ಜಾಲತಾಣ http://www.nvsp.in ಮತ್ತು http://voterportal.eci.gov.in ಭೇಟಿ ನೀಡಿ ಈ ಕಾರ್ಯವನ್ನು ಮಾಡಬಹುದಾಗಿದೆ. ಅಥವಾ ಸಹಾಯವಾಣಿ voter helpline application ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಹೊಸದಾಗಿ ಹೆಸರು ಸೇರ್ಪಡೆ ಮಾಡುವುದಿದ್ದರೆ ನಮೂನೆ 6, ಮತದಾರರು ಸ್ಥಳಾಂತರವಾಗಿದ್ದರೆ, ಮೃತಪಟ್ಟಿದ್ದರೆ, ಹೆಸರು ಪುನರಾವರ್ತನೆಯಾಗಿದ್ದರೆ, ಹೆಸರು ತೆಗೆಯಲು ನಮೂನೆ 7 ಹಾಗೂ ಹೆಸರು ಮತ್ತಿತರ ತಿದ್ದುಪಡಿಗಳಿದ್ದರೆ ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.