ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಜೂನ್ ಮೊದಲ ವಾರದಿಂದ ಆರಂಭವಾಗುತ್ತಿದ್ದು, ಇದಕ್ಕೂ ಪೂರ್ವಭಾವಿಯಾಗಿ ಕೃಷಿ ಇಲಾಖೆ ಮೂಲಕ ಬಿತ್ತನೆ ಬೀಜ, ರಸಗೊಬ್ಬರ, ಪರಿಕರ ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ರಿಯಾಯಿತಿ ದರದ ಬಿತ್ತನೆ ಬೀಜ ಅಕ್ರಮ ಮಾರಾಟವನ್ನು ತಡೆಗಟ್ಟಲು ಮುಂದಾಗಿರುವ ಕೃಷಿ ಇಲಾಖೆ ಇದೇ ಮೊದಲ ಬಾರಿಗೆ ಬಾರ್ ಕೋಡ್ ಸ್ಕ್ಯಾನರ್ ಕಡ್ಡಾಯಗೊಳಿಸಿದ್ದು, ಸ್ಕ್ಯಾನ್ ಆದ ಬಳಿಕವಷ್ಟೇ ಗಣಕಯಂತ್ರದಲ್ಲಿ ನಮೂದಾಗಿ ರಶೀದಿ ಬರುತ್ತದೆ.
ವಿವಿಧ ಕಂಪನಿಗಳ ಪ್ರತಿ ಕೆಜಿ ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಸಾಮಾನ್ಯ ರೈತರಿಗೆ 25 ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಪಂಗಡದ ಫಲಾನುಭವಿ ರೈತರಿಗೆ 30 ರೂಪಾಯಿ ರಿಯಾಯಿತಿ ನೀಡಲಾಗುತ್ತಿದ್ದು, ಒಟ್ಟು ಐದು ಎಕರೆ ಬಿತ್ತನೆ ಬೀಜಕ್ಕೆ ಈ ರಿಯಾಯಿತಿ ದರ ಲಭ್ಯವಾಗುತ್ತದೆ.