ತೆಂಗು ಅಭಿವೃದ್ಧಿ ಮಂಡಳಿಯು ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯವನ್ನು ಜಾರಿಗೆ ತಂದಿದ್ದು, ವಾರ್ಷಿಕ ಪ್ರೀಮಿಯಂ ಕೇವಲ 94 ರೂಪಾಯಿಗಳನ್ನು ಪಾವತಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಜೊತೆಗೂಡಿ ಈ ಸೌಲಭ್ಯವನ್ನು ಜಾರಿಗೊಳಿಸಲಾಗುತ್ತಿದ್ದು, ಇದರಡಿ ಅಪಘಾತ ಮತ್ತು ಸಾವಿಗೆ ಐದು ಲಕ್ಷ ರೂಪಾಯಿವರೆಗೆ ವಿಮಾ ರಕ್ಷೆ ಸಿಗಲಿದೆ.
ವಾರ್ಷಿಕ ಪ್ರೀಮಿಯಂ 375 ರೂಪಾಯಿಗಳಾಗಿದ್ದು, ಈ ಪೈಕಿ 281 ರೂಪಾಯಿಗಳನ್ನು ತೆಂಗು ಅಭಿವೃದ್ಧಿ ಮಂಡಳಿ ಪಾವತಿಸಲಿದ್ದು, ನಿಮ್ಮ ಸುರಕ್ಷತೆ ಪಡೆಯಲು ಇಚ್ಛಿಸುವರು ಉಳಿದ 94 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ತೆಂಗಿನ ಮರ ಹತ್ತುವ ವೇಳೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ ಒಂದು ಲಕ್ಷ ರೂಪಾಯಿವರೆಗೆ ನೆರವು ಸಿಗಲಿದ್ದು, ತೆಂಗು ಅಭಿವೃದ್ಧಿ ಮಂಡಳಿಯ ‘ಫ್ರೆಂಡ್ಸ್ ಆಫ್ ಕೋಕೋನಟ್ ಟ್ರೀ’ ಮತ್ತು ನೀರಾ ತಂತ್ರಜ್ಞ ತರಬೇತಿ ಯೋಜನೆ ಅಡಿ ತರಬೇತಿ ಪಡೆಯುತ್ತಿರುವವರಿಗೆ ಒಂದು ವರ್ಷದ ಅವಧಿಗೆ ಉಚಿತವಾಗಿ ವಿಮಾ ಸೌಲಭ್ಯ ಸಿಗಲಿದೆ.
18ರಿಂದ 65 ವರ್ಷ ವಯಸ್ಸಿನೊಳಗಿರುವವರು ಈ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದ್ದು ಆನ್ಲೈನ್ ಮೂಲಕವೂ 94 ರೂಪಾಯಿಗಳನ್ನು ಪಾವತಿಸಿ ಇದಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ವೆಬ್ಸೈಟ್ www.coconutboard.gov.in ಗೆ ಭೇಟಿ ನೀಡಬಹುದಾಗಿದೆ.