ರೈಲ್ವೆಯನ್ನು ದೇಶದ ಜೀವನಾಡಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕೋಟಿಗಟ್ಟಲೆ ಪ್ರಯಾಣಿಕರು ರೈಲನ್ನೇ ನೆಚ್ಚಿಕೊಂಡಿರ್ತಾರೆ. ಹಾಗಾಗಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲ್ವೆ ಇಲಾಖೆ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿತ್ತು.
ಆದ್ರೀಗ ಕೋವಿಡ್ ಪ್ರಕರಣಗಳು ಕಡಿಮೆಯಾಗಿರೋದ್ರಿಂದ ಸ್ಥಗಿತಗೊಳಿಸಿದ್ದ ಕೆಲವು ಸೌಲಭ್ಯಗಳನ್ನು ಮತ್ತೆ ಒದಗಿಸಲಾಗ್ತಿದೆ. ಈವರೆಗೆ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ನೀವು ತಲುಪಬೇಕಾದ ಸ್ಥಳದ ವಿಳಾಸವನ್ನು ಭರ್ತಿ ಮಾಡಬೇಕಿತ್ತು. ಆದ್ರೆ ಇನ್ಮೇಲೆ ಗಮ್ಯಸ್ಥಾನದ ವಿವರವನ್ನು ಪ್ರಯಾಣಿಕರು ಕೊಡಬೇಕಾಗಿಲ್ಲ.
ಕೊರೊನಾ ಸೋಂಕು ಪ್ರಾರಂಭವಾದಾಗಿನಿಂದ್ಲೂ ಕಡ್ಡಾಯವಾಗಿದ್ದ ನಿಯಮವನ್ನೀಗ ರೈಲ್ವೆ ಇಲಾಖೆ ಬದಲಾಯಿಸಿದೆ. ಇದರಿಂದಾಗಿ ಟಿಕೆಟ್ ಬುಕ್ಕಿಂಗ್ ಸುಲಭವಾಗುತ್ತದೆ. ಕೊರೊನಾ ಸೋಂಕಿತರನ್ನು ಪತ್ತೆ ಮಾಡುವ ಸಲುವಾಗಿ ವಿಳಾಸ ನಮೂದನ್ನು ಕಡ್ಡಾಯ ಮಾಡಲಾಗಿತ್ತು.
ರೈಲುಗಳಲ್ಲಿ ಮತ್ತೆ ಪ್ರಯಾಣಿಕರಿಗೆ ಬೆಡ್‌ರೋಲ್, ಹೊದಿಕೆ, ದಿಂಬನ್ನು ನೀಡಲು ಇಲಾಖೆ ನಿರ್ಧರಿಸಿದೆ. ಈಗ ಸಾಮಾನ್ಯ ಟಿಕೆಟ್ ತೆಗೆದುಕೊಂಡರೂ ನೀವು ಆರಾಮಾಗಿ ಪ್ರಯಾಣ ಮಾಡಬಹುದು.