
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡಿರುವ ಮಹತ್ವದ ಮಾಹಿತಿಯೊಂದರಲ್ಲಿ ಸರ್ಕಾರದ ಲಾಂಛನದ ಬಳಕೆ ಕುರಿತಂತೆ ಸ್ಪಷ್ಟನೆ ಕೊಡಲಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ತಮ್ಮ ಲೆಟರ್ ಹೆಡ್ ಅಥವಾ ವಿಸಿಟಿಂಗ್ ಕಾರ್ಡ್ ಗಳಲ್ಲಿ ಕರ್ನಾಟಕ ಸರ್ಕಾರದ ಲಾಂಛನ ಬಳಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಸ್. ಸತೀಶ್ ಅವರು ಬರೆದಿದ್ದ ಪತ್ರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಿಂಬರಹ ನೀಡುವ ಮೂಲಕ ಈ ಸ್ಪಷ್ಟನೆ ನೀಡಿದೆ.