alex Certify ಗಮನಿಸಿ: ಅಕ್ಟೋಬರ್‌ 1ರಿಂದ ʼಕ್ರೆಡಿಟ್‌ ಕಾರ್ಡ್‌ʼ ನಿಯಮಗಳಲ್ಲಿ ಬದಲಾವಣೆ; ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಅಕ್ಟೋಬರ್‌ 1ರಿಂದ ʼಕ್ರೆಡಿಟ್‌ ಕಾರ್ಡ್‌ʼ ನಿಯಮಗಳಲ್ಲಿ ಬದಲಾವಣೆ; ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ…

ಇದೇ ಅಕ್ಟೋಬರ್ 1 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ 2022ರ ಏಪ್ರಿಲ್‌ನಲ್ಲೇ ಹೊಸ ಕ್ರೆಡಿಟ್‌ ನಿಯಮಗಳನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ 1 ರಿಂದ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ನೀವು ಮೂರು ಬದಲಾವಣೆಗಳನ್ನು ಗಮನಿಸಬಹುದು. ಈ ನಿಯಮಗಳು ಕ್ರೆಡಿಟ್ ಕಾರ್ಡ್ ಮಿತಿ ಅನುಮತಿ, ಕ್ರೆಡಿಟ್ ಕಾರ್ಡ್ ಟೋಕನೈಸೇಶನ್ ಮತ್ತು ಕಾರ್ಡ್‌ ವಿತರಕರಿಗೆ ಓಟಿಪಿ ನೀಡಿಕೆಗೆ ಸಂಬಂಧಪಟ್ಟಿವೆ.

1. ಕ್ರೆಡಿಟ್ ಕಾರ್ಡ್ ಮಿತಿಗೆ ಅನುಮತಿ: ಈಗ ಕ್ರೆಡಿಟ್ ಕಾರ್ಡ್ ವಿತರಕರು ತಮ್ಮ ಸ್ವಂತ ವಿವೇಚನೆಯಿಂದ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇದನ್ನು ಕಾರ್ಡ್ ಹೊಂದಿರುವವರು ಅನುಮೋದಿಸಬೇಕು ಮತ್ತು ಒಮ್ಮೆ ಮಾಡಿದ ನಂತರ ತಿಳಿಸಬೇಕು.ಈ ಹಿಂದೆ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಸಂದೇಶಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು. ಮಿತಿಯನ್ನು ಹೆಚ್ಚಿಸುವ ಮೊದಲು ಯಾವುದೇ ಅನುಮತಿ ಕೇಳುತ್ತಿರಲಿಲ್ಲ. ಅಕ್ಟೋಬರ್ 1ರ ನಂತರ ಕಾರ್ಡ್‌ದಾರರ ಲಿಖಿತ ಒಪ್ಪಿಗೆಯಿಲ್ಲದೆ ಕ್ರೆಡಿಟ್ ಲೈನ್ ಮಿತಿಯನ್ನು ಹೆಚ್ಚಿಸುವುಂತಿಲ್ಲ.

2. ಕ್ರೆಡಿಟ್ ಕಾರ್ಡ್ ಟೋಕನೈಸೇಶನ್:  ಈ ಹಿಂದೆ ಥರ್ಡ್‌ ಪಾರ್ಟಿ ಪೇಮೆಂಟ್‌ ಅಪ್ಲಿಕೇಶನ್‌ಗಳು, ಬ್ಯಾಂಕ್‌ಗಳಿಂದ ಪ್ಲಾಟ್‌ಫಾರ್ಮ್‌ಗಳಿಗೆ ಪೇಮೆಂಟ್‌ ಮಾಡಲು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಗಳು, ಹೊಂದಿರುವವರ ಹೆಸರು ಮತ್ತು CVV ಗಳನ್ನು ಬಳಸುತ್ತಿದ್ದವು. ಈಗ ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ  ವಹಿವಾಟುಗಳನ್ನು ಸುರಕ್ಷಿತವಾಗಿಸಲು ಆರ್‌ಬಿಐ ಕಾರ್ಡ್ ಟೋಕನೈಸೇಶನ್ ವ್ಯವಸ್ಥೆಯನ್ನು ತಂದಿದೆ. ಈಗ ಥರ್ಡ್‌ ಪಾರ್ಟಿ ಪೇಮೆಂಟ್‌ ಅಪ್ಲಿಕೇಶನ್‌ಗಳು, ವಹಿವಾಟುಗಳಿಗಾಗಿ ಗ್ರಾಹಕರ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಸರಳವಾಗಿ ಬಳಸಲಾಗುವುದಿಲ್ಲ. ಪ್ರತಿಯೊಂದು ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ವಹಿವಾಟಿನ ಉದ್ದೇಶಕ್ಕಾಗಿ ಬಳಸಲಾಗುವ ಟೋಕನ್ ಸಂಖ್ಯೆಗೆ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.ಅಕ್ಟೋಬರ್ 1ರಿಂದ ಈ ನಿಯಮ ಕಡ್ಡಾಯವಾಗಲಿದೆ.

3. ಕಾರ್ಡ್ ವಿತರಕರಿಗೆ OTP ಪಡೆಯಲು ಅನುಮತಿ: ಕ್ರೆಡಿಟ್‌ ಕಾರ್ಡ್‌ ನೀಡಿ 30 ದಿನಗಳಾದ್ರೂ ಗ್ರಾಹಕರು ಅದನ್ನು ಆಕ್ಟಿವೇಟ್‌ ಮಾಡದೇ ಇದ್ದಲ್ಲಿ ಕ್ರೆಡಿಟ್ ಕಾರ್ಡ್ ವಿತರಕರು ಮೊದಲು OTP ಆಧಾರಿತ ಒಪ್ಪಿಗೆಯನ್ನು ಪಡೆಯಬೇಕು. ಕಾರ್ಡ್ ಅನ್ನು ಸಕ್ರಿಯಗೊಳಿಸಲು ಗ್ರಾಹಕರು  ನಿರಾಕರಿಸಿದರೆ ಕ್ರೆಡಿಟ್ ಕಾರ್ಡ್ ವಿತರಕರು, ಏಳು ದಿನಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದೆ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...