ಯಕೃತ್ತು ಅಥವಾ ಲಿವರ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಏಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಯಕೃತ್ತು ಆರೋಗ್ಯಕರವಾಗಿದ್ದರೆ ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ.
ಅಷ್ಟೇ ಅಲ್ಲ ಅನೇಕ ರೋಗಗಳಿಂದ ನಾವು ದೂರವಿರಬಹುದು. ಆದರೆ ಕೆಲವೊಂದು ದುರಭ್ಯಾಸಗಳಿಂದಾಗಿ ನಮ್ಮ ಲಿವರ್‌ಗೆ ಹಾನಿಯಾಗುತ್ತದೆ. ಅವು ಯಾವುದು ಅನ್ನೋದನ್ನು ನೋಡೋಣ.
ಧೂಮಪಾನ – ಸಿಗರೇಟ್ ಆರೋಗ್ಯಕ್ಕೆ ಹಾನಿಕರ. ದೀರ್ಘಕಾಲದವರೆಗೆ ಸಿಗರೇಟ್ ಸೇದುವುದರಿಂದ ಯಕೃತ್ತಿನಲ್ಲಿ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತವೆ. ಧೂಮಪಾನದ ಅಭ್ಯಾಸವು ಯಕೃತ್ತಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಲಿವರ್ ಸರಿಯಾಗಿ ಕೆಲಸ ಮಾಡಬೇಕೆಂದರೆ ಧೂಮಪಾನವನ್ನು ತ್ಯಜಿಸಬೇಕು.
ಪೋಷಕಾಂಶಗಳ ಕೊರತೆ – ದೀರ್ಘಕಾಲದವರೆಗೆ ದೇಹದಲ್ಲಿ ಪೋಷಕಾಂಶಗಳ ಕೊರತೆಯಿದ್ದರೂ ಅದು ಯಕೃತ್ತನ್ನು ಹಾನಿಗೊಳಿಸುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕಲು ಯಕೃತ್ತು ಕೆಲಸ ಮಾಡುತ್ತದೆ. ಆದರೆ ಕೆಲವೊಮ್ಮೆ ದೇಹದಲ್ಲಿ ವಿಟಮಿನ್ ಎ ಮತ್ತು ಡಿ ಪ್ರಮಾಣ ಹೆಚ್ಚಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಲಿವರ್ ಆರೋಗ್ಯವಾಗಿರಬೇಕೆಂದರೆ ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ.
ಕಡಿಮೆ ನೀರಿನ ಸೇವನೆ – ಕಡಿಮೆ ನೀರಿನ ಸೇವನೆಯು ಲಿವರ್ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಲಿವರ್ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಚೆನ್ನಾಗಿ ನೀರು ಕುಡಿಯುವುದರಿಂದ ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ ಮತ್ತು ದೇಹವು ಆರೋಗ್ಯಕರವಾಗಿರುತ್ತದೆ.