alex Certify ಗಣ್ಯ ವ್ಯಕ್ತಿಗಳ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದ ಆರೋಪಿಗಳು ಅಂದರ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣ್ಯ ವ್ಯಕ್ತಿಗಳ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದ ಆರೋಪಿಗಳು ಅಂದರ್…..!

ಮಹಿಳೆಯರ, ಗಣ್ಯ ವ್ಯಕ್ತಿಗಳ, ರಾಜಕಾರಣಿಗಳ ಪೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಕೆಲವೊಮ್ಮೆ ಹಳೆ ದ್ವೇಷದ ಹಿನ್ನೆಲೆಯಿಂದಲೂ ಇಂತಾ ಕೃತ್ಯಗಳು ಜರುಗುತ್ತವೆ. ದೇವನಹಳ್ಳಿ ಪೊಲೀಸರು ಇಂತಹದ್ದೇ ಗುಂಪೊಂದನ್ನು ಅರೆಸ್ಟ್ ಮಾಡಿದ್ದಾರೆ.

ಅಶ್ಲೀಲವಾಗಿ ಫೋಟೊ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಈ ಗುಂಪು, ಕಳೆದ ಹಲವು ದಿನಗಳಿಂದ ದೇವನಹಳ್ಳಿಯ, ಚನ್ನರಾಯಪಟ್ಟಣದ ಪೊಲೀಸರಿಗೆ ತಲೆನೋವಾಗಿತ್ತು. ಕಡೆಗೂ ಯಶಸ್ವಿ ಕಾರ್ಯಾಚರಣೆ ನಡೆಸಿ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಆಕಾಶ್(22), ನಿತಿನ್ ಕುಮಾರ್ (22) ಮತ್ತು ಮುನಿರಾಜು (36) ಬಂಧಿತ ಆರೋಪಿಗಳು.

BBMP ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿ; ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿ ಎಂದ ಹೈಕೋರ್ಟ್

ಈ ಮೂವರು ಮಹಿಳೆಯರು, ಎಂಎಲ್ಎ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಕೆಟ್ಟದಾಗಿ ಎಡಿಟ್ ಮಾಡಿದ ಫೋಟೊಗಳನ್ನು ಇನ್ಸ್ಟಗ್ರಾಂ ನಲ್ಲಿ ಅಪ್ಲೋಡ್ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ದೇವನಹಳ್ಳಿ ತಾಲ್ಲೂಕಿನ ನಲ್ಲಪ್ಪನಹಳ್ಳಿ ಮತ್ತು ಚೀಮಾಚನಹಳ್ಳಿ ನಿವಾಸಿಗಳು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಂಥ ಹೀನ ಕೃತ್ಯ ನಡೆಸುತ್ತಿದ್ದರು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...