ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣೇಶ ಮೂರ್ತಿ ಸ್ಥಾಪನೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ.
ಮಾರುಕಟ್ಟೆಯಿಂದ ಗಣೇಶ ಮೂರ್ತಿ ತರುವ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ಮಾರುಕಟ್ಟೆಯಿಂದ ಎಂದೂ ಬಲಮುರಿ ಗಣೇಶನನ್ನು ಮನೆಗೆ ತರಬೇಡಿ. ಎಡಮುರಿ ಗಣೇಶನನ್ನು ತಂದು ಪೂಜೆ ಮಾಡಿ.
ಮನೆಯಲ್ಲಿ, ಕುಳಿತ ಗಣೇಶ ಮೂರ್ತಿ ಸ್ಥಾಪನೆ ಮಾಡಬೇಕು. ಕಚೇರಿ, ಅಂಗಡಿಯಲ್ಲಿ ನಿಂತ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಪೂಜೆ ಮಾಡಬೇಕು.
ಗಣೇಶ ಮೂರ್ತಿಯನ್ನು ತರುವಾಗ ಗಣೇಶನ ಎರಡೂ ಕಾಲು ಭೂಮಿ ಮೇಲಿರುವಂತೆ ನೋಡಿಕೊಳ್ಳಿ. ಇದ್ರಿಂದ ಕೆಲಸದಲ್ಲಿ ಸಫಲತೆ ಹಾಗೂ ಸ್ಥಿರತೆಯಿರುತ್ತದೆ.
ಎಲ್ಲ ಮನೋಕಾಮನೆಗಳು ಪೂರ್ತಿಯಾಗಬೇಕಾದ್ರೆ ಸಿಂಧೂರ ಬಣ್ಣದ ಗಣಪತಿಯನ್ನು ಮನೆಗೆ ತನ್ನಿ.
ಮೂರ್ತಿ ಸ್ಥಾಪನೆ ವೇಳೆ ದಕ್ಷಿಣ ಭಾಗಕ್ಕೆ ಮುಖ ಇರದಂತೆ ನೋಡಿಕೊಳ್ಳಿ. ಇದು ಕೆಟ್ಟ ಪರಿಣಾಮ ಬೀರುತ್ತದೆ.
ಮನೆಯಲ್ಲಿ ಗಣೇಶನ ಚಿತ್ರ ಇಡುವ ವೇಳೆ ಮೋದಕ ಹಾಗೂ ಇಲಿ ಇರುವ ಪೋಸ್ಟರ್ ತನ್ನಿ.
ಮನೆಯ ಮುಂದಿನ ಗೇಟ್ ಬಳಿ ಎರಡು ಗಣೇಶ ಮೂರ್ತಿಗಳನ್ನಿಡಿ. ಎರಡೂ ಗಣೇಶ ಮೂರ್ತಿಯ ಕಾಲುಗಳು ಸೇರಿರುವಂತೆ ನೋಡಿಕೊಳ್ಳಿ.
ಸುಖ-ಶಾಂತಿ, ಸಮೃದ್ಧಿಗಾಗಿ ಬಿಳಿ ಬಣ್ಣದ ಗಣೇಶ ಮೂರ್ತಿಯನ್ನು ಮನೆಗೆ ತನ್ನಿ.