ಗಣೇಶ ವಿಘ್ನಗಳನ್ನು ನಿವಾರಿಸುವಾತ, ಆತನನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಭಕ್ತಿಯಿಂದ ಪೂಜೆ ಮಾಡಿದ್ದಾರೆ ಮನೆಯಲ್ಲಿರುವ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.
ಹಾಗಾಗಿ ಗಣೇಶನ ವಿಗ್ರಹವನ್ನು ಮನೆಯಲ್ಲಿಟ್ಟು ಈ ರೀತಿ ವಿಶೇಷವಾಗಿ ಅಲಂಕರಿಸಿ. ಇದರಿಂದ ನಿಮ್ಮ ಇಷ್ಟಾರ್ಥಗಳು ನೇರವೇರುತ್ತದೆ.
ಗಣೇಶನ ವಿಗ್ರಹವನ್ನು ಮಾವಿನ ಎಲೆಗಳಿಂದ ಶೃಂಗರಿಸಿದರೆ ಆದಾಯ ಕಡಿಮೆಯಾಗುವುದಿಲ್ಲ. ಹಣ ಯಾವಾಗಲೂ ಮನೆಯಲ್ಲಿ ಇರುತ್ತದೆ, ಖರ್ಚಾಗುವುದಿಲ್ಲ.
ಗಣೇಶನ ವಿಗ್ರಹವನ್ನು ದಾಸವಾಳ ಹೂವಿನಿಂದ ಅಲಂಕರಿಸಿದರೆ ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ. ಹೊಸ ಹೊಸ ಅವಕಾಶಗಳು ಸಿಗುತ್ತದೆ.
ಗಣೇಶನ ವಿಗ್ರಹವನ್ನು ಬೇವಿನ ಎಲೆಗಳಿಂದ ಅಲಂಕರಿಸಿದರೆ ಮನೆಯಲ್ಲಿರುವ ನಕರಾತ್ಮಕ ಅಂಶಗಳು ನಾಶವಾಗಿ ಮನೆಯ ಸದಸ್ಯರಲ್ಲಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.