ಹಿಂದೂ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆಯಿರುತ್ತದೆ. ಅವರಿಗಿಷ್ಟವಾಗುವ ದೇವರ ಪೂಜೆ ನಡೆಯುತ್ತದೆ. ಹಿಂದೂ ಧರ್ಮದಲ್ಲಿ ವಾರದ ಎಲ್ಲ ದಿನಗಳನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಬುಧವಾರದಂದು ಗಣೇಶನ ಆರಾಧನೆ ನಡೆಯುತ್ತದೆ. ಬುಧವಾರ ಶುದ್ಧ ಮನಸ್ಸಿನಿಂದ ಗಣೇಶನ ಪೂಜೆ ಮಾಡಿದ್ರೆ ಸಂತೋಷ, ಸಮೃದ್ಧಿ, ಲಭಿಸುತ್ತದೆ ಎಂದು ನಂಬಲಾಗಿದೆ.
ವಾಸ್ತು ಪ್ರಕಾರ, ಮನೆಯಲ್ಲಿ ಗಣೇಶನ ಸ್ಫಟಿಕ ವಿಗ್ರಹವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅದನ್ನು ಇಡುವ ಮೊದಲು, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಮನೆಯ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯು ಧನಾತ್ಮಕವಾಗಿ ಬದಲಾಗುತ್ತದೆ. ಜೀವನ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಯಾಗುತ್ತವೆ. ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.
ಗಣೇಶನ ಸ್ಫಟಿಕ ಮೂರ್ತಿಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು. ಈ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇಲ್ಲಿ ಗಣೇಶನ ಸ್ಫಟಿಕದ ವಿಗ್ರಹವನ್ನು ಇರಿಸುವುದರಿಂದ ಮನೆಗೆ ಶುಭವಾಗುತ್ತದೆ. ಕುಟುಂಬ ಸದಸ್ಯರ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಗಣೇಶನ ಮೂರ್ತಿಯನ್ನು ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬಹುದು. ಗಣೇಶನ ವಿಗ್ರಹವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಹಾಗೆಯೇ ಗಣೇಶನ ಪೂಜೆ ಮಾಡುವ ಸ್ಥಳ ಶುದ್ಧವಾಗಿರಬೇಕು. ಕೊಳಕಾದ ಜಾಗದಲ್ಲಿ ಎಂದೂ ದೇವರ ವಿಗ್ರಹವನ್ನು ಸ್ಥಾಪಿಸಬಾರದು.