alex Certify ಗಣರಾಜ್ಯೋತ್ಸವ ವೀಕ್ಷಣೆಗೆ ಆನ್‌ಲೈನ್‌ನಲ್ಲೇ ಮಾಡಬಹುದು ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣರಾಜ್ಯೋತ್ಸವ ವೀಕ್ಷಣೆಗೆ ಆನ್‌ಲೈನ್‌ನಲ್ಲೇ ಮಾಡಬಹುದು ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಸಂಪೂರ್ಣ ಮಾಹಿತಿ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಅಸ್ತಿತ್ವಕ್ಕೆ ಬಂದ ದಿನ ಜನವರಿ 26. ಈ ದಿನವನ್ನು ಆಚರಿಸಲು ಇಡೀ ರಾಷ್ಟ್ರವೇ ಒಂದುಗೂಡುತ್ತದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಭಾರತ ಮುಳುಗೇಳುತ್ತದೆ.

ಪ್ರತಿ ವರ್ಷ ಜನವರಿ 26ನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. 1950ರಲ್ಲಿ ಈ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿತು. ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಮೆರವಣಿಗೆಯ ಭವ್ಯತೆಯನ್ನು ವೀಕ್ಷಿಸಲು ವಿವಿಧೆಡೆಯಿಂದ ಜನರು ಆಗಮಿಸ್ತಾರೆ. ಈ ವರ್ಷ ಸರ್ಕಾರ ಇ-ಪೋರ್ಟಲ್ ಅನ್ನು ಪ್ರಾರಂಭಿಸಿದೆ.

ಗಣರಾಜ್ಯೋತ್ಸವದ ಪರೇಡ್‌ ಸೇರಿದಂತೆ ಇತರ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಇಚ್ಚಿಸುವವರು ಪೋರ್ಟಲ್‌ ಮೂಲಕ ಆನ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. www.aamantran.mod.gov.in ಅನ್ನು ಗಣ್ಯರು/ಅತಿಥಿಗಳಿಗೆ ಇ-ಆಹ್ವಾನಗಳನ್ನು ವಿಸ್ತರಿಸಲು ಮತ್ತು ಗಣರಾಜ್ಯೋತ್ಸವ,  ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲೆಂದೇ ಪ್ರಾರಂಭಿಸಲಾಗಿದೆ.

ಟಿಕೆಟ್‌ ಬುಕ್‌ ಮಾಡೋದು ಹೇಗೆ ?

www.aamantran.mod.gov.in ಗೆ ವಿಸಿಟ್‌ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ. ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಈವೆಂಟ್‌ಗೆ ಹಾಜರಾಗುವ ವ್ಯಕ್ತಿಗಳ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.ವಿವರಗಳನ್ನು ಭರ್ತಿ ಮಾಡಿದ ನಂತರ OTPಯನ್ನು ನಮೂದಿಸಿ. ಬಳಿಕ ಟಿಕೆಟ್ ಆಯ್ಕೆ ಮಾಡಿಕೊಳ್ಳಿ. ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಆನ್‌ಲೈನ್ನಲ್ಲೇ ಹಣವನ್ನೂ ಪಾವತಿ ಮಾಡಿ.

ಇತರ ವೈಶಿಷ್ಟ್ಯಗಳು

ಈ ಪೋರ್ಟಲ್‌ ಮೂಲಕ ಗಣ್ಯರಿಗೆ ಮತ್ತು ಅತಿಥಿಗಳಿಗೆ ಆನ್‌ಲೈನ್ ಪಾಸ್‌ಗಳನ್ನು ವಿತರಿಸುವ ಸೌಲಭ್ಯವನ್ನು ಒದಗಿಸುತ್ತದೆ. QR ಕೋಡ್ ಆಧಾರಿತ ದೃಢೀಕರಣ, ಇಮೇಲ್‌ಗಳು/sms ಮೂಲಕ ಪಾಸ್‌ಗಳು/ಟಿಕೆಟ್‌ಗಳ ಡಿಜಿಟಲ್ ವಿತರಣೆ ಸೌಲಭ್ಯವಿದೆ. ರದ್ದುಗೊಳಿಸಲಾಗದ ಮತ್ತು ವರ್ಗಾವಣೆ ಮಾಡಲಾಗದ ಟಿಕೆಟ್‌ಗಳು ಲಭ್ವವಿವೆ.

ಆಹ್ವಾನಿತರಿಂದ ಸ್ವೀಕಾರವನ್ನು ಪಡೆಯಲು ಪಾಸ್‌ಗಳಿಗೆ RSVP ಆಯ್ಕೆ ಮಾಡಬೇಕು. ಒಂದು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕೇವಲ 10 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದು. ಪೋರ್ಟಲ್ ಮೂಲಕ ಇ-ಆಮಂತ್ರಣಗಳನ್ನು ವಿಸ್ತರಿಸುವುದರ ಜೊತೆಗೆ, ಟಿಕೆಟ್‌ಗಳ ಖರೀದಿಗಾಗಿ ಬೂತ್‌ಗಳು/ಕೌಂಟರ್‌ಗಳನ್ನು ಈ ಕೆಳಗಿನ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು, ಅಲ್ಲಿ ರಕ್ಷಣಾ ಸಚಿವಾಲಯವು ಆನ್‌ಲೈನ್ ಟಿಕೆಟ್‌ಗಳನ್ನು ನೀಡುತ್ತದೆ.

ಸೇನಾ ಭವನ (ಗೇಟ್ ಸಂಖ್ಯೆ 2), ಶಾಸ್ತ್ರಿ ಭವನ (ಗೇಟ್ ಸಂಖ್ಯೆ 3), ಜಂತರ್ ಮಂತರ್ (ಮುಖ್ಯ ಗೇಟ್ ಹತ್ತಿರ), ಪ್ರಗತಿ ಮೈದಾನ (ಗೇಟ್ ಸಂಖ್ಯೆ 1), ಸಂಸತ್ ಭವನ (ಸ್ವಾಗತ ಕಚೇರಿ) – ಸಂಸದರಿಗಾಗಿ ವಿಶೇಷ ಕೌಂಟರ್ (18.01.2023 ರಂದು ತೆರೆಯಲಾಗುವುದು). ಸಮಯ ಮುಂಜಾನೆ 10.00 ರಿಂದ 12.30 ಮತ್ತು ಮಧ್ಯಾಹ್ನ 2 ರಿಂದ 4.30 . ವಿವರವಾದ ಸೂಚನೆಗಳಿಗಾಗಿ, www.mod.gov.in, www.indianrdc.mod.gov.in ಗೆ ಭೇಟಿ ನೀಡಿ.

ದೆಹಲಿಯಲ್ಲಿ ಗಣರಾಜ್ಯೋತ್ಸವ ಅದ್ಧೂರಿಯಾಗಿ ನೆರವೇರುತ್ತದೆ. ಭಾರತೀಯ ರಕ್ಷಣಾ ಇಲಾಖೆಯ ಕೌಶಲ್ಯ, ಅತ್ಯಾಧುನಿಕ ಶಸ್ತ್ರಗಳ ಪ್ರದರ್ಶನ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಶಿಷ್ಟ ಟ್ಯಾಬ್ಲೋಗಳ ಭವ್ಯ ಮೆರವಣಿಗೆಗೆ ಸಾಕ್ಷಿಯಾಗಲಿದೆ. ಈ ದಿನ ರಾಜಪಥದಲ್ಲಿ ವಿದ್ಯುಕ್ತ ಮೆರವಣಿಗೆಗಳು ನಡೆಯುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...