ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೂ ಮುನ್ನ ದೆಹಲಿ ಪೊಲೀಸರು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕೊರೊನಾ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ರಿಲೀಸ್ ಮಾಡದ್ದಾರೆ. ಈ ನಡುವೆ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆಯಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸುವ ಸಲುವಾಗಿ ವೈದ್ಯಕೀಯ ಕಾರಣ ಹೊರತುಪಡಿಸಿ ದೆಹಲಿ ಪೊಲೀಸ್ ಇಲಾಖೆ ಮಿಕ್ಕೆಲ್ಲ ಸಿಬ್ಬಂದಿ ರಜೆಯನ್ನು ರದ್ದುಗೊಳಿಸಿದೆ ಎನ್ನಲಾಗಿದೆ.
ದೆಹಲಿ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಯ ವಿವರ ಇಂತಿದೆ :
ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾಗುವವರು ಕೊರೊನಾ 2 ಡೋಸ್ ಲಸಿಕೆ ಸ್ವೀಕರಿಸುವುದು ಕಡ್ಡಾಯ
ವಿಸಿಟರ್ಸ್ ಕೊರೊನಾ ಲಸಿಕೆ ಸ್ವೀಕರಿಸಿದ ಬಗ್ಗೆ ಪ್ರಮಾಣ ಪತ್ರವನ್ನು ತರತಕ್ಕದ್ದು
15 ವರ್ಷದೊಳಗಿನ ಮಕ್ಕಳಿಗೆ ಗಣರಾಜ್ಯೋತ್ಸವ ಪರೇಡ್ಗೆ ನಿರ್ಬಂಧ
ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವವರು ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಸಿಟ್ಟಿಂಗ್ ಬ್ಲಾಕ್‌ಗಳು ಸಂದರ್ಶಕರಿಗೆ ಬೆಳಿಗ್ಗೆ 7 ಗಂಟೆಗೆ ತೆರೆಯುತ್ತದೆ ಮತ್ತು ಅದರಂತೆ ಎಲ್ಲರೂ ಆಗಮಿಸುವಂತೆ ವಿನಂತಿಸಲಾಗಿದೆ
ಪಾರ್ಕಿಂಗ್ ಸೀಮಿತವಾಗಿರುವುದರಿಂದ, ಸಂದರ್ಶಕರಿಗೆ ಟ್ಯಾಕ್ಸಿ ಬಳಸಲು ಸೂಚಿಸಲಾಗಿದೆ
ಸಂದರ್ಶಕರು ಮಾನ್ಯವಾದ ಗುರುತಿನ ಚೀಟಿಯನ್ನು ಹೊಂದಲು ಮತ್ತು ಭದ್ರತಾ ತಪಾಸಣೆಯ ಸಮಯದಲ್ಲಿ ಸಹಕರಿಸಲು ವಿನಂತಿಸಲಾಗಿದೆ
ಪ್ರತಿ ಪಾರ್ಕಿಂಗ್ ಪ್ರದೇಶದಲ್ಲಿ ರಿಮೋಟ್-ನಿಯಂತ್ರಿತ ಕಾರ್ ಲಾಕ್ ಕೀಗಳನ್ನು ಠೇವಣಿ ಮಾಡಲು ಅವಕಾಶವಿರುತ್ತದೆ.