alex Certify ಗಣರಾಜ್ಯೋತ್ಸವದಂದು ಉತ್ತರಾಖಂಡದ ಟೋಪಿ, ಮಣಿಪುರದ ಶಾಲ್ ಧರಿಸಿದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣರಾಜ್ಯೋತ್ಸವದಂದು ಉತ್ತರಾಖಂಡದ ಟೋಪಿ, ಮಣಿಪುರದ ಶಾಲ್ ಧರಿಸಿದ ಪ್ರಧಾನಿ ಮೋದಿ

ಜನವರಿ 26, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿ ಕಾಣಿಸಿಕೊಂಡರು. ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲು ಮೋದಿ ಇದೆ ಸಾಂಪ್ರದಾಯಿಕ ಉಡುಗೆಯಲ್ಲಿದ್ದರು.

ಅಮರಜ್ಯೋತಿ ಸ್ಮಾರಕದ ಸುತ್ತ ಉತ್ತರಾಖಂಡದ ರಾಜ್ಯ ಪುಷ್ಪವಾದ ಬ್ರಹ್ಮಕಮಲದಿಂದ ಅಲಂಕರಿಸಲಾಗಿತ್ತು.‌ ಅವರು ಸ್ಮಾರಕಕ್ಕೆ ಅರ್ಪಿಸಿದ್ದು ಸಹ ಇದೇ ಬ್ರಹ್ಮಕಮಲವನ್ನು‌. ಇನ್ನು ಗಮನಾರ್ಹ ಅಂಶವೆಂದರೆ ಪ್ರಧಾನಿ ಅವರು ಕೇದಾರನಾಥದಲ್ಲಿ ಪೂಜೆ ಮಾಡುವಾಗಲೂ ಈ ಹೂವನ್ನೇ ಬಳಸುತ್ತಾರೆ. ಉತ್ತರಾಖಂಡದ ಟೋಪಿಯೊಂದಿಗೆ, ಮಣಿಪುರದ ಸಾಂಪ್ರದಾಯಿಕ ಸ್ಟೋಲ್ ಧರಿಸಿದ್ದರು.

ಉತ್ತರಾಖಂಡ ಹಾಗೂ ಮಣಿಪುರದ ಸಾಂಪ್ರದಾಯಿಕ ಉಡುಗೆಗಳನ್ನು ಪರಿಕರಗಳಾಗಿ ಬಳಸಿರುವ ಅವರ ನಡೆ ಕುತೂಹಲಕಾರಿಯಾಗಿದೆ. ಏಕೆಂದರೆ ಮುಂದಿನ ತಿಂಗಳು ಈ ಎರಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ‌. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿದ ಪ್ರಧಾನಿ ನಂತರ ಗಣರಾಜ್ಯೋತ್ಸವ ಪಥಸಂಚಲನ ನಡೆಯುತ್ತಿರುವ ರಾಜಪಥಕ್ಕೆ ತೆರಳಿದರು. ರಾಷ್ಟ್ರೀಯ ಯುದ್ಧ ಸ್ಮಾರಕದ ಅಮರ್ ಜವಾನ್ ಜ್ಯೋತಿಯನ್ನು ಜನವರಿ 21 ರಂದು ಶಾಶ್ವತ ಜ್ವಾಲೆಯೊಂದಿಗೆ ವಿಲೀನಗೊಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...