ಬೆಂಗಳೂರು: ಗಡ್ಡಧಾರಿಯೊಬ್ಬರು ಮುಂದಿನ ಸಿಎಂ ಆಗಲಿದ್ದಾರೆ ಎಂಬ ಮೈಲಾರಲಿಂಗೇಶ್ವರದ ವೆಂಕಪ್ಪಯ್ಯ ಒಡೆಯರ್ ಭವಿಷ್ಯವಾಣಿ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೇವರ ಹೇಳಿಕೆಗಳನ್ನು ನಾನು ಓರೆ ಹಚ್ಚಲು ಹೋಗಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಮೈಲಾರದ ಶಕ್ತಿ ಅಧಿಕವಾಗಿದೆ. ನಾನು ಈ ಬಗ್ಗೆ ಪ್ರಶ್ನೆ ಮಾಡುವುದು ಓರೆಗೆ ಹಚ್ಚಿ ನೋಡುವುದು ಮಾಡಲ್ಲ. ಇಷ್ಟು ದಿನ ನಾನು ಗಡ್ಡಬಿಟ್ಟಿದ್ದು ನಿಜ. ಆದರೆ ಈಗ ನಾನು ಗಡ್ಡ ಬಿಟ್ಟಿಲ್ಲ. ಗಡ್ಡಧಾರಿ ಮುಂದಿನ ಸಿಎಂ…..ಹೀಗೆ ಭವಿಷ್ಯ ನುಡಿದಿದ್ದಾರೆ ಎಂದು ನೀವೆಲ್ಲರೂ ಹೇಳುತ್ತಿರುವಾಗ ಇನ್ಮುಂದೆ ನಾನು ಮತ್ತೆ ಗಡ್ಡ ಬಿಡಬೇಕಾಗುತ್ತೆ ಎಂದು ಹೇಳಿದರು.
BIG NEWS: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಕೊರೊನಾ ಕೇಸ್; ಹೈರಿಸ್ಕ್ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್; ಮತ್ತೆ ಜಾರಿಯಾಗುತ್ತಾ ವೀಕೆಂಡ್ ಕರ್ಫ್ಯೂ..?
ಮುಂದಿನ ಮಾರ್ಚ್ ತಿಂಗಳಿಗೆ ಗಡ್ಡಧಾರಿಯೋರ್ವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೈಲಾರಲಿಂಗೇಶ್ವರದ ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.