alex Certify ಗಡಿಯಲ್ಲಿ ಮೆಷಿನ್ ಗನ್ ಹಿಡಿದ ರೋಬೋಟ್ ಗಳನ್ನ ನೇಮಿಸಿದ ಚೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿಯಲ್ಲಿ ಮೆಷಿನ್ ಗನ್ ಹಿಡಿದ ರೋಬೋಟ್ ಗಳನ್ನ ನೇಮಿಸಿದ ಚೀನಾ

ಭಾರತ-ಚೀನಾ ಗಡಿ ವಿವಾದವು ಇನ್ನು ಇತ್ಯರ್ಥವಾಗಿಲ್ಲ.‌ ಈಗಾಗಲೇ ಉದ್ವಿಗ್ನ ಪರಿಸ್ಥಿತಿಯಲ್ಲಿರುವ ಗಡಿ ಗಲಾಟೆಯನ್ನ ಚೀನಾ ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ಮೆಷಿನ್ ಗನ್ ಹಿಡಿದ ರೋಬೊಟ್ ಗಳನ್ನ‌ ಗಡಿ ಕಾಯಲು ಚೀನಾ ನೇಮಿಸುತ್ತಿದೆ ಎಂದು ವರದಿಯಾಗಿದೆ.

ಭಾರತೀಯ ಮಾಧ್ಯಮ ವರದಿಗಳ ಪ್ರಕಾರ, ಶಸ್ತ್ರಾಸ್ತ್ರಗಳು ಮತ್ತು ಅಗತ್ಯ ವಸ್ತುಗಳ ಸರಬರಾಜು, ಎರಡನ್ನೂ ಸಾಗಿಸುವ ಸಾಮರ್ಥ್ಯವಿರುವ ಡಜನ್‌ಗಟ್ಟಲೆ ಸ್ವಯಂಚಾಲಿತ ವಾಹನಗಳನ್ನು ಟಿಬೆಟ್‌ಗೆ ರವಾನೆ ಮಾಡಲಾಗುತ್ತಿದೆ. ಚೀನಾದ ಪಡೆಗಳು ಭಾರತೀಯ ಪಡೆಗಳೊಂದಿಗೆ ಘರ್ಷಣೆಯಲ್ಲಿ ತೊಡಗಿರುವ ಗಡಿ ಪ್ರದೇಶಗಳಲ್ಲಿ ಈ ವಾಹನಗಳು ಹಾಗೂ ರೋಬೋಟ್ ಗಳನ್ನ ನಿಯೋಜಿಸಲಾಗಿದೆ.

ವೈಯರ್ ಲೆಸ್ ಆಗಿ ನಿರ್ವಹಿಸಬಹುದಾದ ಶಸ್ತ್ರಸಜ್ಜಿತ ಶಾರ್ಪ್ ಕ್ಲಾ ರೋಬೋಟ್ ಗಳು ಕೈಯಲ್ಲಿ ಹಗುರವಾದ ಮೆಷಿನ್‌ಗನ್‌ ಹಿಡಿದು ಮ್ಯೂಲ್ 200 ವಾಹನದಲ್ಲಿ ಭಾರತ-ಚೀನಾ ಗಡಿಯಲ್ಲಿ ನಿಂತಿವೆ. ಮ್ಯೂಲ್-200 ಚೈನಾ ಕಂಡುಹಿಡಿದಿರುವ ಮಾನವ ರಹಿತ ಆಯುಧಸಹಿತ ಟ್ರಕ್. ಸುಮಾರು 120-200 ಮ್ಯೂಲ್ ವಾಹನಗಳನ್ನ ಟಿಬೆಟ್‌ಗೆ ಕಳುಹಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಗಡಿಯ ಸಮೀಪದಲ್ಲಿ ನೆಲೆಗೊಂಡಿವೆ.

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಿದ ಆರೋಗ್ಯ ಇಲಾಖೆ

ಮಾನವರಹಿತ ವಾಹನಗಳಿಗೆ ಪೂರಕವಾಗಿ ಚೀನಾ 70 VP-22 ಶಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು ಸಹ ಒದಗಿಸಿದೆ. ಇವುಗಳಲ್ಲಿ ಎಪ್ಪತ್ತೇಳು ಗಡಿ ಪ್ರದೇಶಗಳಲ್ಲಿವೆ. ಒಟ್ಟು 150 ಲಿಂಕ್ಸ್ ಆಲ್-ಟೆರೈನ್ ವಾಹನಗಳನ್ನು ಗಡಿಗೆ ರವಾನಿಸಲಾಗಿದೆ. ಲಿಂಕ್ಸ್ ಅನ್ನು ವ್ಯಾಪಕ ಶ್ರೇಣಿಯ ಸೇನೆಗಳು ಬಳಸಿಕೊಳ್ಳುತ್ತವೆ ಮತ್ತು ಪಡೆಗಳನ್ನು ಒಯ್ಯಲು ಆಗಾಗ್ಗೆ ಈ ವಾಹನಗಳನ್ನ ಬಳಸಿಕೊಳ್ಳಲಾಗುತ್ತದೆ.

ಹೋವಿಟ್ಜರ್‌ಗಳು, ಹೆವಿ ಮೆಷಿನ್ ಗನ್‌ಗಳು, ಕ್ಷಿಪಣಿ ಲಾಂಚರ್‌ಗಳಂತಹ ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ನಿಯೋಜಿಸಲು ಸಹ ಇದನ್ನು ಬಳಸಲಾಗುತ್ತದೆ. ಸಧ್ಯ ಚೀನಾದ ಈ ಸಾಂಕೇತಿಕ ನಡೆಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...