22 ವರ್ಷದ ಸಿಂಗಾಪುರದ ವಿದ್ಯಾರ್ಥಿಯೊಬ್ಬ ಬ್ರಿಟಿಷ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಕ್ಷೆಗಳಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತನ್ನ ಭೌಗೋಳಿಕೆ ಜ್ಞಾನ ಎಷ್ಟಿದೆ ಎಂಬುದನ್ನು ವೀಕ್ಷಕರಿಗೆ ತೋರಿಸುವ ಮೂಲಕ ಅಪಾರ ಮೆಚ್ಚುಗೆ ಗಳಿಸಿದ್ದಾನೆ.
ಮ್ಯಾಕ್ಸಿಮಿಲಿಯನ್ ಝೆಂಗ್ ಎಂಬ ವಿದ್ಯಾರ್ಥಿಯು ಯುನಿವರ್ಸಿಟಿ ಚಾಲೆಂಜ್ನ ಭಾಗವಾಗಿ ರಾಜ್ಯದ ಗಡಿಗಳನ್ನು ಹೊಂದಿಲ್ಲದ ಭಾರತದ ಭೂಪಟದಲ್ಲಿ ಆಯೋಜಕರು ಕೇಳಿದ ಎಲ್ಲಾ ರಾಜಧಾನಿಗಳು, ನಗರಗಳು ಹಾಗೂ ರಾಜ್ಯಗಳನ್ನು ಗುರುತಿಸಿದ್ದಾರೆ.
ಇಂಪಿರಿಯಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ವಿಧ್ಯಾರ್ಥಿಯು ಕಿಂಗ್ಸ್ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಬ್ರಿಟಿಷ್ ದೂರದರ್ಶನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಭಾರತದ ನಕ್ಷೆಯನ್ನು ಪರದೆಯ ಮೇಲೆ ಪ್ರದರ್ಶಿಸಿ ಅದರ ರಾಜ್ಯದ ಗಡಿಗಳನ್ನು ತೆಗೆದುಹಾಕಿದಾಗ ಮತ್ತು ರಾಜ್ಯ ರಾಜಧಾನಿಯನ್ನು ಸೂಚಿಸುವ ನಕ್ಷೆಯಲ್ಲಿ ಕೇವಲ ಒಂದು ಬಾಣವನ್ನು ಪ್ರದರ್ಶಿಸಿದಾಗ, ಸ್ಪರ್ಧಿಗಳು ಆ ಬಾಣ ಇರುವ ಜಾಗದಲ್ಲಿ ಬರುವ ರಾಜಧಾನಿ ಮತ್ತು ಅದರ ರಾಜ್ಯವನ್ನು ಹೆಸರಿಸಬೇಕಾಗಿತ್ತು.