ಬಲಶಾಲಿಯಾದ ಮೂಳೆಗಳಿಲ್ಲದೆ ಹೋದರೆ ಜೀವನವೇ ಯಾತನಾಮಯ. ಈಗಂತೂ 40 ರ ಪ್ರಾಯ ದಾಟಿದ ಎಷ್ಟೋ ಜನರಿಗೆ ಅನಾರೋಗ್ಯ ಕಟ್ಟಿಟ್ಟಬುತ್ತಿ. ಇದೊಂದು ಬಳ್ಳಿ ನಿಮ್ಮ ಮನೆ ಅಂಗಳದಲ್ಲಿ ಹಬ್ಬಿಸಿ ನಿಯಮಿತವಾಗಿ ಇದರ ಉಪಯೋಗ ಮಾಡಿದರೆ ವಜ್ರದಂತಹ ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬಹುದು.
ಕನ್ನಡದಲ್ಲಿ ಮಂಗರವಳ್ಳಿ ಎಂದು ಹೆಸಾರಾಗಿರುವ ಈ ಸಸ್ಯ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಉಪಯೋಗ ಪುರಾತನ ಕಾಲದಿಂದಲೂ ಇದೆ. ಸಂಸ್ಕೃತದಲ್ಲಿ ಮಂಗರವಳ್ಳಿಗೆ ಅಸ್ತಿಶೃಂಖಲಾ ಎಂಬ ಹೆಸರಿದೆ.
ಮೂಳೆಗಳನ್ನು ಗಟ್ಟಿಮುಟ್ಟಾಗಿಸುವ ಗುಣ ಹೊಂದಿರುವ, ಕ್ಯಾಕ್ಟಸ್ ಜಾತಿಗೆ ಸೇರಿದ ಈ ಗಿಡ ಬಹಳ ಸುಲಭವಾಗಿ ಹೆಚ್ಚಿನ ಆರೈಕೆ ಇಲ್ಲದೆ ಬೆಳೆಸಬಹುದು.
ಮೂಳೆ ಮುರಿತಕ್ಕೆ ಒಳಗಾದವರಿಗೆ ನಾಟಿ ಔಷಧಿಯ ಚಿಕತ್ಸೆ ರೂಪದಲ್ಲಿ ಇದರ ರಸವನ್ನು ಹಚ್ಚಲಾಗುತ್ತದೆ.
ಸಂಧಿ ನೋವಿನ ಸಮಸ್ಯೆ ಇಂದ ಬಳಲುವವರಿಗೆ ಇದು ದಿವ್ಯೌಷಧ. ಯಾವುದೇ ಸಣ್ಣಪುಟ್ಟ ಗಾಯಗಳಿಗೂ ಮಂಗರವಳ್ಳಿ ಕಾಂಡದ ರಸ ಲೇಪಿಸಿದರೆ ಬೇಗನೇ ಗಾಯಾ ಮಾಯುತ್ತದೆ.
ಮಂಗರವಳ್ಳಿಯ ಚಟ್ನಿ, ಚಟ್ನಿ ಪುಡಿಯ ಬಳಕೆ ನಿಯಮಿತವಾಗಿ ಮಾಡುವುದರಿಂದ ಮೂಳೆಗೆ ಸಂಭಂದಿಸಿದ ಅನೇಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.