
ಸುನೀಲ್ ಕುಮಾರ್ ನಿರ್ದೇಶನ ರಾಜವರ್ಧನ್ ನಟನೆಯ ‘ಗಜ ರಾಮ’ ಚಿತ್ರ ಈಗಾಗಲೇ ಶೀರ್ಷಿಕೆಯಿಂದ ಸಖತ್ ಸೌಂಡ್ ಮಾಡಿದ್ದು, ಇದೀಗ ಈ ಸಿನಿಮಾಗೆ ಪ್ರತಿಭಾವಂತ ನಟ ದೀಪಕ್ ಸೇರ್ಪಡೆಯಾಗಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದೆ.
ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಮಲ್ಲಿಕಾರ್ಜುನ್ ಆಗ ಗ್ಸೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಈ ಸಿನಿಮಾಗೆ ನಟಿ ತಪಸ್ವಿನಿ ಪೂಣಚ್ಚ ಎಂಟ್ರಿ ಕೊಟ್ಟಿದ್ದು, ಇನ್ನೇನು ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಸಜ್ಜಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಲಿದ್ದಾರೆ.
