ಹೈದರಾಬಾದ್‌ನ ಚೈತನ್ಯಪುರಿಯಲ್ಲಿ 32 ವರ್ಷದ ಮಹಿಳೆಯೊಬ್ಬಳು ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತಳನ್ನ ತೋಟ ಸುಷ್ಮಾ ಎಂದು ಗುರುತಿಸಿದ್ದು, ತನ್ನ ಗಂಡನ ಕಿರುಕುಳದಿಂದ ಆಕೆ ಜೀವವನ್ನ ತೆಗೆದುಕೊಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
2018ರಲ್ಲಿ ಮದುವೆಯಾದ ಸುಷ್ಮಾ ಗಂಡನೊಂದಿಗೆ, ಹೈದರಾಬಾದ್‌ನ ಕೊತಪೇಟ್‌ನಲ್ಲಿ ವಾಸಿಸುತ್ತಿದ್ದಳು. ವರದಿಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ಅವರ ದಾಂಪತ್ಯ ಹದಗೆಟ್ಟಿತ್ತು. ಮಹಿಳೆಯ ಪತಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು ಮತ್ತು ಸಣ್ಣಪುಟ್ಟ ವಿಷಯಗಳಿಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದು ಕೊಲೆಯೊ ಆತ್ಮಹತ್ಯೆಯೊ ಎಂದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಮಹಿಳೆಯ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ರೀತಿಯ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿತ್ತು. ಮಹಿಳೆಯೊಬ್ಬಳು ಬಟ್ಟೆಯಿಂದ ತನ್ನ ಪತಿಯ ಕತ್ತು ಹಿಸುಕಿ ಕೊಂದಿದ್ದಳು ಎನ್ನಲಾಗಿದೆ. ವರದಿಗಳ ಪ್ರಕಾರ, ಫರ್ಜಾನಾ ಬೇಗಂ ತನ್ನ ಪತಿ ಶೇಖ್ ನ ಕುಡಿತದ ಚಟದಿಂದ ಬೇಸತ್ತಿದ್ದಳು, ಅದನ್ನ ವಿರೋಧಿಸಿದ್ಧಳು. ಆದರೆ ಶೇಖ್ ಕುಡಿತ ಬಿಡಲಿಲ್ಲ.
ಅದೇ ರೀತಿ ಕುಡಿದು ಬಂದ ಶೇಖ್, ಪರ್ಜಾನಾಳೊಂದಿಗೆ ಜಗಳವಾಡಿ ಕಡೆಗೆ ಕೊಲೆಯಲ್ಲಿ ಅಂತ್ಯವಾದನು. ಕೃತ್ಯ ಎಸಗಿದ ಬಳಿಕ ಆಕೆ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಾಳೆ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಫರ್ಜಾನಾ ಬೇಗಂ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.