ಗಂಡನ ಕನಸಿನ ಕೂಸಿಗೆ ಜೀವ ತುಂಬಿದ ಮಡದಿ, ʼಕೆಫೆ ಕಾಫಿ ಡೇʼ ಯನ್ನು ಮತ್ತೆ ಟ್ರಾಕ್ ಗೆ ತರಲು ಸಿದ್ಧರಾದ ಮಾಳವಿಕ ಹೆಗಡೆ | Kannada Dunia | Kannada News | Karnataka News | India News
ಸಿಸಿಡಿ ಸಣ್ಣ ಕಂಪನಿಯಲ್ಲ, ದೇಶದಾದ್ಯಂತ ನೂರಾರು ಬ್ರ್ಯಾಂಚ್ ಗಳನ್ನ ಹೊಂದಿದೆ. ಸಾವಿರಾರು ಉದ್ಯೋಗಿಗಳಿದ್ದಾರೆ, ಕೋಟ್ಯಾಂತರ ಗ್ರಾಹಕರನ್ನ ಹೊಂದಿರುವ ಸಿಸಿಡಿ ಬೆನ್ನಿಗೆ ಅಷ್ಟೇ ದೊಡ್ಡ ಮೊತ್ತದ ಸಾಲ ಅಂಟಿಕೊಂಡಿತ್ತು. ಅದನ್ನ ಸವಾಲಾಗಿ ಸ್ವೀಕರಿಸಿ, ಮಾಳವಿಕ ಹೆಗ್ಡೆ ಧೈರ್ಯಶಾಲಿ ಮಾತ್ರವಲ್ಲ ಸಿಇಒ ಆಗಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ಸಿಡಿಇಎಲ್ ಸಾಲದ ಮೊತ್ತ ಗಮನಾರ್ಹವಾಗಿ ಕಡಿಮೆಯಾಗಿದೆ. ಕರ್ನಾಟಕದ ಕೆಫೆ ಕಂಪನಿಯನ್ನು ಮತ್ತೆ ಟ್ರ್ಯಾಕ್ ಮಾಡಲು ಮ್ಯಾನೇಜ್‌ಮೆಂಟ್ ಪ್ರಯತ್ನಿಸುತ್ತಿದೆ ಎಂಬುದು ಈ ಮೂಲಕ ಸಾಬೀತಾಗಿದೆ. ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 31, 2021 ರ ಹೊತ್ತಿಗೆ CDEL ನ ನಿವ್ವಳ ಸಾಲ 1,731 ಕೋಟಿ ರೂ.ಗಳಷ್ಟಿದೆ. ಒಟ್ಟು ಲೋನ್ 1,779 ಕೋಟಿಗಳಷ್ಟಿದೆ, ಇದು 1,263 ಕೋಟಿ ದೀರ್ಘಾವದಿ ಮತ್ತು 516 ಕೋಟಿ ರೂ.ಗಳ ಅಲ್ಪಾವಧಿ ಸಾಲಗಳನ್ನ ಒಳಗೊಂಡಿದೆ ಎಂದು ಸಿಸಿಡಿ ರಿಪೋರ್ಟ್ ಕಾರ್ಡ್ ಹೇಳಿದೆ. ಇದರಿಂದ ಕಂಪನಿಯು ಆರ್ಥಿಕವಾಗಿ ಗಣನೀಯ ಸುಧಾರಣೆ ಕಂಡಿರುವುದನ್ನು ಕಾಣಬಹುದು. ಇವರು ಸಿಇಓ ಆಗುವ ಮುನ್ನ ಕಂಪನಿ ಮೇಲೆ 7 ಸಾವಿರ ಕೋಟಿ ರೂ. ಗಿಂತ ಅಧಿಕ ಸಾಲದ ಹೊರೆ ಇತ್ತು.