ಸ್ಮಾರ್ಟ್ಫೋನ್ ನಿಮ್ಮ ಖುಷಿಯನ್ನು ಹಾಳು ಮಾಡುತ್ತದೆಯಂತೆ. ಸಂಶೋಧನೆಯೊಂದು ಆಘಾತಕಾರಿ ಸಂಗತಿಯನ್ನು ಹೇಳಿದೆ. ಬೇರೆಯವರ ಜೊತೆ ಬೆರೆಯದೆ ಮೊಬೈಲ್ ಗೇಮ್, ಚಾಟ್ ಅಂತಾ ಬ್ಯುಸಿಯಿರುವವರು ಅಸಂತೋಷಿಗಳಾಗಿರುತ್ತಾರಂತೆ.
ಸರ್ವೆಗಾಗಿ 10 ಲಕ್ಷ ಹದಿಹರೆಯದವರ ಡೇಟಾ ಸಂಗ್ರಹಿಸಲಾಗಿತ್ತು. ಸರ್ವೆಯಲ್ಲಿ 12, 14 ಹಾಗೂ 16 ವರ್ಷದವರು ಪಾಲ್ಗೊಂಡಿದ್ದರು. ಸರ್ವೆಯಲ್ಲಿ ಹದಿಹರೆಯದವರಿಗೆ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ ನಲ್ಲಿ ಎಷ್ಟು ಸಮಯ ಕಳೆಯುತ್ತಾರೆಂದು ಪ್ರಶ್ನೆ ಕೇಳಲಾಗಿತ್ತು.
ಹೊರಗಡೆ ಆಟ, ಸ್ನೇಹಿತರ ಜೊತೆ ಹರಟೆ, ಪುಸ್ತಕ ಓದಲು ಎಷ್ಟು ಸಮಯ ನೀಡುತ್ತೀರೆಂದೂ ಕೇಳಲಾಗಿತ್ತು. ಜೊತೆಗೆ ಅವ್ರು ಎಷ್ಟು ಸಂತೋಷವಾಗಿದ್ದಾರೆನ್ನುವ ಬಗ್ಗೆಯೂ ಅನೇಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಯ್ತು. ಸರ್ವೆ ಪ್ರಕಾರ ಮೊಬೈಲ್ ನಲ್ಲಿ ಕಡಿಮೆ ಸಮಯ ಕಳೆಯುವವರು ಹೆಚ್ಚು ಸಂತೋಷವಾಗಿದ್ದರು. ಒಂದು ಗಂಟೆಗಿಂತ ಹೆಚ್ಚು ಸಮಯವನ್ನು ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕಳೆಯುವವರು ಸಂತೋಷವಾಗಿರಲಿಲ್ಲ. ಅವರ ಮನಸ್ಸಿನಲ್ಲಿ ನೋವು, ಅಸಂತೋಷ ಅಡಗಿತ್ತು ಎಂದು ಸರ್ವೆಯಲ್ಲಿ ಹೇಳಲಾಗಿದೆ.