ಗಂಟಲು ನೋವು ಎಂದಾಕ್ಷಣ ಕೊರೊನಾ ಎಂದುಕೊಂಡು ಓಡಿ ಹೋಗಿ ವೈದ್ಯರನ್ನು ಸಂಪರ್ಕಿಸಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಮಾಡಿ ನೋಡಿ. ಹಾಗಿದ್ದೂ ಕಡಿಮೆಯಾಗದಿದ್ದಲ್ಲಿ ಮಾತ್ರ ವೈದ್ಯರನ್ನು ಸಂಪರ್ಕಿಸಿ.
ಬೆಚ್ಚಗಿನ ಈ ಒಂದು ಚಹಾ ಸಾಕು ನಿಮ್ಮ ಗಂಟಲು ನೋವನ್ನು ದೂರ ಮಾಡಲು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಒಂದು ಲೋಟ ನೀರಿಗೆ ಅರ್ಧ ಇಂಚಿನಷ್ಟು ಹಸಿ ಶುಂಠಿಯನ್ನು ಜಜ್ಜಿ ಹಾಕಿ. ನಾಲ್ಕು ಕಾಳು ಮೆಣಸು ಎರಡು ಚಿಟಿಕೆ ಅರಶಿನ ಉದುರಿಸಿ. ಚೆನ್ನಾಗಿ ಕುದಿಸಿ. ಹತ್ತು ನಿಮಿಷದ ಬಳಿಕ ಕೆಳಗಿಳಿಸಿ ಬಿಸಿ ಇರುವಾಗಲೇ ಕುಡಿಯಿರಿ. ದಿನಕ್ಕೆರಡು ಬಾರಿ ಈ ಚಹಾ ಸೇವಿಸಿ. ಗಂಟಲು ನೋವಿನೊಂದಿಗೆ ಶೀತ, ಕೆಮ್ಮು ಕೂಡಾ ದೂರವಾಗುತ್ತದೆ.
ಶುಂಠಿ, ಕೆಮ್ಮು, ಗಂಟಲ ಕೆರೆತವನ್ನು ಕಡಿಮೆ ಮಾಡಿದರೆ ಕಾಳುಮೆಣಸು ಬ್ಯಾಕ್ಟೀರಿಯಾ ನಿವಾರಕ ಗುಣವನ್ನು ಹೊಂದಿದ್ದು ವಿಟಮಿನ್ ಸಿಯನ್ನು ನೀಡುತ್ತದೆ. ಅಂಟಿ ಆಕ್ಸಿಡೆಂಟ್ ಹೇರಳವಾಗಿರುವ ಅರಶಿನವಂತೂ ಹಲವು ರೀತಿಯಲ್ಲಿ ಉಪಕಾರಿ.
ಈ ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಮತ್ತು ಸಂಜೆಯಂತೆ ದಿನಕ್ಕೆರಡು ಬಾರಿ ಕುಡಿಯುವುದರಿಂದ ಎರಡೇ ದಿನಗಳಲ್ಲಿ ಶೀತ ಕೆಮ್ಮುವಿನ ಲಕ್ಷಣಗಳು ದೂರವಾಗುತ್ತವೆ.