ಚಳಿಗಾಲದಲ್ಲಿ ಕಾಡುವ ಗಂಟಲು ನೋವಿನ ಸಮಸ್ಯೆಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಔಷಧ ತಯಾರಿಸಬಹುದು. ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಅರಶಿನ ಸೋಂಕುಗಳ ವಿರುದ್ಧ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತದೆ.
ಗಂಟಲು ನೋವಿನ ಸಮಸ್ಯೆ ಇದ್ದರೆ ಒಂದು ಕಪ್ ಬೆಚ್ಚಗಿನ ನೀರಿಗೆ ಅರ್ಧ ಚಮಚ ಅರಶಿನ ಪುಡಿ ಹಾಗು ಚಿಟಿಕೆ ಉಪ್ಪು ಸೇರಿಸಿ. ಇದನ್ನು ಬೆಚ್ಚಗಿರುವಾಗಲೇ ಕುಡಿಯುವ ಮೂಲಕ ಗಂಟಲು ನೋವನ್ನು ನಿವಾರಣೆ ಮಾಡಬಹುದು.
ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸವನ್ನು ಬೆರೆಸಿ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವುದರಿಂದ ಇದು ಬಹುಬೇಗ ಗಂಟಲು ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಿ. ನಿಂಬೆರಸ ಕೂಡಾ ಸೇರಿಸಬಹುದು. ಇದು ಕೂಡ ಗಂಟಲು ನೋವಿನ ನಿವಾರಕವಾಗಿ ಕೆಲಸ ನಿರ್ವಹಿಸುತ್ತದೆ.
ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸವನ್ನು ಸೇವಿಸುವ ಮೂಲಕವೂ ನೀವು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.