alex Certify ‘ಗಂಗಾ ವಿಲಾಸ್’ ಕ್ರೂಸ್ ನಲ್ಲಿ ಪ್ರವಾಸ ಮಾಡಲು ಬಯಸಿದ್ದೀರಾ ? ಹಾಗಾದ್ರೆ ನೀವು ಈ ಅವಧಿವರೆಗೆ ಕಾಯಲೇಬೇಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಂಗಾ ವಿಲಾಸ್’ ಕ್ರೂಸ್ ನಲ್ಲಿ ಪ್ರವಾಸ ಮಾಡಲು ಬಯಸಿದ್ದೀರಾ ? ಹಾಗಾದ್ರೆ ನೀವು ಈ ಅವಧಿವರೆಗೆ ಕಾಯಲೇಬೇಕು…!

ವಿಶ್ವದ ಅತಿ ದೂರದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಪಡೆದಿರುವ ‘ಗಂಗಾ ವಿಲಾಸ್’ ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಚಾಲನೆ ನೀಡಿದ್ದಾರೆ. 27 ನದಿ, 2 ದೇಶ, 51 ತಾಣಗಳನ್ನು 51 ದಿನಗಳ ಅವಧಿಯಲ್ಲಿ ಇದು ಸುತ್ತಲಿದೆ.

ವಾರಣಾಸಿಯಿಂದ ಈ ಹಡಗು ಯಾನ ಆರಂಭಿಸಿದ್ದು, ಗಂಗಾ, ಬ್ರಹ್ಮಪುತ್ರ ಸೇರಿದಂತೆ 27 ನದಿಗಳಲ್ಲಿ ಸಂಚರಿಸುತ್ತದೆ. ಬಾಂಗ್ಲಾದೇಶವನ್ನು ಸಹ ಈ ಐಷಾರಾಮಿ ಕ್ರೂಸ್ ಹಾದು ಬರಲಿದ್ದು, ಅಂತಿಮವಾಗಿ ಅಸ್ಸಾಂನ ದಿಬ್ರುಗಡದಲ್ಲಿ ಪ್ರವಾಸ ಕೊನೆಗೊಳ್ಳಲಿದೆ. ಈ 51 ದಿನಗಳ ಅವಧಿಯಲ್ಲಿ 50ಕ್ಕೂ ಅಧಿಕ ಆಕರ್ಷಕ ತಾಣಗಳನ್ನು ಪ್ರವಾಸಿಗರು ವೀಕ್ಷಿಸಬಹುದಾಗಿದೆ.

ಓರ್ವ ಪ್ರವಾಸಿಗರಿಗೆ 55 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ನೀವೇನಾದರೂ ಹೋಗಬೇಕೆಂದು ಅಂದುಕೊಂಡಿದ್ದರೆ 2024ರ ಮಾರ್ಚ್ ವರೆಗೂ ಕಾಯಲೇ ಬೇಕಾಗಿದೆ. ಹೌದು, ಅಲ್ಲಿಯವರೆಗೂ ಈ ಹಡಗಿನ ಎಲ್ಲಾ ಟಿಕೆಟ್ ಗಳು ಬುಕ್ ಆಗಿದ್ದು, ಮುಂದಿನ ವರ್ಷದ ಏಪ್ರಿಲ್ ನಿಂದ ಹೊಸ ಬುಕಿಂಗ್ ಆರಂಭಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...