ತಮಿಳು ಚಿತ್ರರಂಗದ ನಟಿ, ನಿರೂಪಕಿ ಮಹಾಲಕ್ಷ್ಮಿ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರ ಜೊತೆ ಮದುವೆಯಾಗಿದ್ದು, ಇವರಿಬ್ಬರ ಮದುವೆ ಫೋಟೋಗಳು ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ತಿರುಪತಿಯಲ್ಲಿ ಇವರಿಬ್ಬರು ಸಪ್ತಪದಿ ತುಳಿದಿದ್ದು ಈ ಸಂದರ್ಭದಲ್ಲಿ, ಆತ್ಮೀಯರು ಉಪಸ್ಥಿತರಿದ್ದರು. ಇವರಿಬ್ಬರಿಗೂ ಇದು ಎರಡನೇ ಮದುವೆ ಎಂಬುದು ವಿಶೇಷ.
ಮಹಾಲಕ್ಷ್ಮಿ, ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ಸಿನಿಮಾ ಒಂದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು.
ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಹಾಲಕ್ಷ್ಮಿ, ನಿಮ್ಮನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.