ಮಕ್ಕಳ ಮೊದಲ ಶಿಕ್ಷಕರು ಅವರ ಪೋಷಕರು. ಮಕ್ಕಳು ತಮ್ಮ ಹೆತ್ತವರಿಂದ ಜೀವನದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಕಲಿಯುತ್ತಾರೆ. ವಯಸ್ಸಾದವರು ಮಕ್ಕಳಿಂದ ಅನೇಕ ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಂದ ದೊಡ್ಡವರು ಕಲಿಯಬೇಕಾದ ಈ ಗುಣಗಳಿಂದ ಮಕ್ಕಳಂತೆ ಒತ್ತಡ ಮತ್ತು ಉದ್ವೇಗದಿಂದ ದೂರವಿರಬಹುದು.
ವಯಸ್ಕರು ಪ್ರತಿ ಬಾರಿ ಯಾವುದೇ ಕೆಲಸವನ್ನಾದ್ರೂ ಮನಸ್ಸಿನಿಂದ ಮಾಡುವುದಿಲ್ಲ. ಬಲವಂತವಾಗಿ ಮಾಡ್ತಾರೆ. ಮಾಡುವ ಕೆಲಸದಲ್ಲಿ ಆಸಕ್ತಿ, ಉತ್ಸಾಹ ತೋರುವುದಿಲ್ಲ. ಮನಸ್ಸಿನಲ್ಲದ ಮನಸ್ಸಿನಲ್ಲಿ ಕೆಲಸ ಮಾಡಿದ್ರೆ ಖುಷಿ ನೀಡುವುದಿಲ್ಲ. ಮನಸ್ಸಿಗೆ ಬಂದ, ಅವರಿಗೆ ಇಷ್ಟವಾಗುವ ಕೆಲಸವನ್ನು ಮಕ್ಕಳು ಮಾಡುವುದ್ರಿಂದ ಖುಷಿಯಾಗಿರುತ್ತಾರೆ. ಹಾಗಾಗಿ ಪಾಲಕರಾದವರು ಕೂಡ ಮಕ್ಕಳೊಂದಿಗೆ ಬೆರೆತು ಅವರಿಗಿಷ್ಟವಾದ ಕೆಲಸ ಮಾಡಬೇಕು.
ಮಕ್ಕಳು ನಾವು ಮಾಡುವ ಕೆಲಸದ ಬಗ್ಗೆ ಮುಂದಿರುವ ಜನರು ಏನು ಹೇಳ್ತಾರೆ ಎಂಬುದನ್ನು ಆಲೋಚಿಸುವುದಿಲ್ಲ. ಹಾಗಾಗಿ ಮನಸ್ಸಿಗೆ ಬಂದ ಕೆಲಸ ಮಾಡ್ತಾರೆ. ವಯಸ್ಸಾದವರು ಬೇರೆಯವರು ಏನು ಯೋಚನೆ ಮಾಡ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡ್ತಾರೆ. ಇದು ಅವ್ರು ಖುಷಿ ಕಳೆದುಕೊಳ್ಳಲು ಕಾರಣವಾಗಬಹುದು.
ಪ್ರಾಮಾಣಿಕತೆ ಮಕ್ಕಳಲ್ಲಿ ಮಾತ್ರ ನೋಡಲು ಸಾಧ್ಯ. ದೊಡ್ಡವರಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕತೆ ನಾಪತ್ತೆಯಾಗಿದೆ. ಪ್ರಾಮಾಣಿಕವಾಗಿ ಜೀವನ ನಡೆಸಿದ್ರೆ ಸಂತೋಷ, ನೆಮ್ಮದಿ ನಿಮ್ಮನ್ನು ಅರಸಿ ಬರುತ್ತದೆ.
ಮಕ್ಕಳಿಗೆ ಏನಿರಲಿ ಬಿಡಲಿ ಸದಾ ಖುಷಿಯಾಗಿರುತ್ತಾರೆ. ಸಣ್ಣ ಸಣ್ಣ ವಿಷ್ಯಕ್ಕೆ ಅವ್ರು ಖುಷಿ ಅನುಭವಿಸುತ್ತಾರೆ. ದೊಡ್ಡವರಾದವರು ಮಕ್ಕಳಿಂದ ಇದನ್ನು ಕಲಿಯಬೇಕು. ಸಣ್ಣ ಸಣ್ಣ ವಿಷ್ಯಕ್ಕೆ ಖುಷಿ ಅನುಭವಿಸಬೇಕು. ಚಿಕ್ಕ ಚಿಕ್ಕ ವಿಚಾರಕ್ಕೆ ಕೊರಗುತ್ತ ಕೂರಬಾರದು.
ಪ್ರತಿಯೊಬ್ಬ ಮಕ್ಕಳು ವರ್ತಮಾನದಲ್ಲಿ ಜೀವಿಸುತ್ತಾರೆ. ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಾರೆ. ಉಳಿತಾಯ, ಸಂತೋಷದ ಬಗ್ಗೆ ಚಿಂತಿಸುವುದಿಲ್ಲ. ಹಾಗೆ ಮಕ್ಕಳು ಸದಾ ಉತ್ಸಾಹದಿಂದಿರುತ್ತಾರೆ. ಮಕ್ಕಳ ಈ ಗುಣವನ್ನು ನಾವು ಅಳವಡಿಸಿಕೊಳ್ಳಬೇಕು.