alex Certify ಖಿನ್ನತೆ ಮತ್ತು ಒತ್ತಡಕ್ಕೆ ಪರಿಹಾರ ರುಚಿಯಾದ ಈ ತಿನಿಸುಗಳಲ್ಲಿದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಿನ್ನತೆ ಮತ್ತು ಒತ್ತಡಕ್ಕೆ ಪರಿಹಾರ ರುಚಿಯಾದ ಈ ತಿನಿಸುಗಳಲ್ಲಿದೆ…!

ಕೆಲಸದ ಒತ್ತಡದಿಂದ ಹತ್ತಾರು ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಕೆಲಸದ ಗಡಿಬಿಡಿಯಲ್ಲಿ ಸರಿಯಾದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ಕೂಡ ಅಸಾಧ್ಯ. ತಪ್ಪು ಜೀವನ ಶೈಲಿಯಿಂದ ನಿಧಾನವಾಗಿ ಖಿನ್ನತೆ ಕಾಡಲಾರಂಭಿಸುತ್ತದೆ. ಖಿನ್ನತೆಯಿಂದ ದೂರವಿರಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲವು ನಿರ್ದಿಷ್ಟ ಪದಾರ್ಥಗಳು ಒತ್ತಡವನ್ನು ಕಡಿಮೆ ಮಾಡುತ್ತವೆ.

ಒತ್ತಡ ಮತ್ತು ಖಿನ್ನತೆಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ  ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಒತ್ತಡದಿಂದ ಬಳಲುತ್ತಿದ್ದರೆ  ಡಾರ್ಕ್ ಚಾಕೊಲೇಟ್ ತಿನ್ನಬೇಕು. ಸಾಮಾನ್ಯವಾಗಿ ಚಾಕಲೇಟ್‌ ಎಲ್ಲರ ಫೇವರಿಟ್‌. ಡಾರ್ಕ್‌ ಚಾಕಲೇಟ್‌ ತಿನ್ನುವುದರಿಂದ ಒತ್ತಡ ನಿವಾರಣೆಯಾಗುತ್ತದೆ.

ಹುಳಿ ಹಣ್ಣುಗಳು ಕೂಡ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಸಿಟ್ರಸ್‌ ಹಣ್ಣುಗಳು ಒತ್ತಡ ಮತ್ತು ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತವೆ.

ಗೆಣಸು ಕೂಡ ಮನಸ್ಸಿಗೆ ಸಾಕಷ್ಟು ಸಮಾಧಾನವನ್ನು ನೀಡುತ್ತದೆ. ಸಿಹಿ ಗೆಣಸು ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ನಮಗೆ ಪ್ರಯೋಜನಕಾರಿ.

ಫ್ಯಾಟಿ ಫಿಶ್‌ಗಳು ಕೂಡ ನಮ್ಮ ಮನಸ್ಸಿನಿಂದ ಒತ್ತಡವನ್ನು ತೆಗೆದುಹಾಕುವಲ್ಲಿ ಬಹಳ ಸಹಾಯಕವಾಗಿವೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಮನಸ್ಸನ್ನು ಶಾಂತವಾಗಿಡಲು ಫ್ಯಾಟಿ ಫಿಶ್‌ ಸಹಾಯಕವಾಗಿದೆ.

ಪೋಷಕಾಂಶ ಭರಿತ ಅವಕಾಡೊ ಸೇವನೆ ಕೂಡ ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಇದರಲ್ಲಿರುವ ಪೋಷಕಾಂಶಗಳು ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...