ಅಧಿಕ ಒತ್ತಡದಿಂದಾಗಿ ವ್ಯಕ್ತಿ ಖಿನ್ನತೆಗೆ ಒಳಗಾಗ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ಕಾರಣಗಳಿಂದಾಗಿ ಖಿನ್ನತೆ ಕಾಡುತ್ತದೆ. ಇದು ಮಿತಿ ಮೀರಿದಾಗ ಆಸ್ಪತ್ರೆ, ಮಾತ್ರೆಯ ಮೊರೆ ಹೋಗ್ತಾರೆ ಜನರು. ಆದ್ರೆ ಸೂರ್ಯೋದಯದ ವೇಳೆ ಈ ಕೆಲಸ ಮಾಡಿದ್ರೆ ಖಿನ್ನತೆಯಿಂದ ಮುಕ್ತಿ ಪಡೆಯಬಹುದಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃದೋಷ, ಪೂರ್ವ ಜನ್ಮದ ಕರ್ಮ ಹಾಗೂ ಗ್ರಹಗಳ ಕಾರಣದಿಂದಾಗಿ ಖಿನ್ನತೆ ಕಾಡುತ್ತದೆಯಂತೆ. ಪಿತೃದೋಷವಿದ್ದರೆ ಅದು ಜಾತಕದಲ್ಲಿ ತಿಳಿಯುತ್ತದೆ. ಅದನ್ನು ವಿಜ್ಞಾನದಲ್ಲಿ ಅನುವಂಶಿಕ ಖಾಯಿಲೆ ಎನ್ನುತ್ತಾರೆ. ಜಾತಕದ ಐದನೇ ಸ್ಥಾನದಲ್ಲಿ ಪಿತೃ ದೋಷ ಕಾಣಿಸುತ್ತದೆ. ಇದ್ರಿಂದ ವ್ಯಕ್ತಿ ಹಾಗೂ ಪರಿವಾರ ಸಂಕಷ್ಟ ಎದುರಿಸಬೇಕಾಗುತ್ತದೆ.
ಪಿತೃ ದೋಷಕ್ಕೆ ಶಾಂತಿ ಮಾಡಬಹುದು. ಪಂಡಿತರು ಯಾವುದು ಮಾಡಿದ್ರೆ ಒಳಿತು ಎಂಬುದನ್ನು ಸಲಹೆ ನೀಡ್ತಾರೆ. ಆ ಪ್ರಕಾರ ನಡೆದುಕೊಂಡಲ್ಲಿ ಪಿತೃ ದೋಷದಿಂದ ಕಾಡುವ ಖಿನ್ನತೆ ಕಡಿಮೆಯಾಗಲಿದೆ.
ಇನ್ನೊಂದು ಕಾರಣ ಮೊದಲೇ ಹೇಳಿದಂತೆ ಪೂರ್ವ ಜನ್ಮದ ಕರ್ಮ. ಇದು ಕೂಡ ಜಾತಕದಲ್ಲಿ ಕಾಣಿಸುತ್ತದೆ. ಒಂದು ವೇಳೆ ಪೂರ್ವ ಜನ್ಮದ ಕರ್ಮದಿಂದ ಖಿನ್ನತೆ ಕಾಡುತ್ತಿದ್ದಲ್ಲಿ ಸೋಮವಾರದ ದಿನ ನೀರು ಹಾಗೂ ಹಾಲಿನಿಂದ ಭಗವಂತ ಶಿವನ ಪೂಜೆ ಮಾಡಿ. ಸೂರ್ಯೋದಯಕ್ಕೂ ಮೊದಲೆ ಎದ್ದು ಸೂರ್ಯನಿಗೆ ನಮಸ್ಕಾರ ಮಾಡಿ.
ಗ್ರಹ ದೋಷಗಳಿಂದಲೂ ಖಿನ್ನತೆ ಕಾಡುತ್ತದೆ. ಶನಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಾನೆ. ಹಾಗಾಗಿ ಶನಿವಾರ ಎಣ್ಣೆಯನ್ನು ಹನುಮಂತನಿಗೆ ಅರ್ಪಿಸಿ. ಹನುಮಾನ್ ಚಾಲೀಸ್ ಹಾಗೂ ಸುಂದರಕಾಂಡವನ್ನು ಓದಿ.