ಕಣ್ಣಿಗೆ ಕಾಣದ, ದೇಹಕ್ಕೆ ನೋವಾಗದ ಒಂದು ಖಾಯಿಲೆ ಖಿನ್ನತೆ. ಇದು ಮನಸ್ಸನ್ನು ಗೊತ್ತಿಲ್ಲದೆ ತಿಂದು ಮುಗಿಸುತ್ತದೆ. ಸದ್ದಿಲ್ಲದೆ ಸಾವಿಗೆ ಶರಣಾಗುವಂತೆ ಮಾಡುವ ಭಯಾನಕ ಖಾಯಿಲೆ ಇದು. ಖಿನ್ನತೆಗೊಳಗಾದವರಲ್ಲಿ ಕಾಣುವ ಲಕ್ಷಣಗಳೇನು ಎಂಬ ವಿವರ ಇಲ್ಲಿದೆ.
ಖಿನ್ನತೆಗೊಳಗಾದವರಿಗೆ ಏಕಾಗ್ರತೆಯ ಕೊರತೆ ಎದುರಾಗುತ್ತದೆ. ಯಾವುದೇ ಪುಸ್ತಕ ಓದುವಾಗ, ಕೆಲಸ ಮಾಡುವಾಗ ಅದ್ರಲ್ಲಿ ಏಕಾಗ್ರತೆ ಬರುವುದಿಲ್ಲ.
ಖಿನ್ನತೆಗೊಳಗಾದ ವ್ಯಕ್ತಿ ಯಾವುದೇ ವಿಷ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಕಷ್ಟಪಡ್ತಾನೆ. ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲ ಎದುರಾಗುತ್ತದೆ.
ಖಿನ್ನತೆಯ ಇನ್ನೊಂದು ಲಕ್ಷಣವೆಂದ್ರೆ ಸುಸ್ತು. ವ್ಯಕ್ತಿ ಯಾವುದೇ ಕೆಲಸ ಮಾಡ್ತಿದ್ರೂ ಸುಸ್ತು ಕಾಣಿಸಿಕೊಳ್ಳುತ್ತದೆ.
ಖಿನ್ನತೆಗೊಳಗಾದ ವ್ಯಕ್ತಿ ಒಂದಲ್ಲ ಒಂದು ಕಾರಣಕ್ಕೆ ಚಿಂತೆಯಲ್ಲಿರ್ತಾನೆ. ಸದಾ ಯಾವುದಾದ್ರೂ ಚಿಂತೆ ಆತನಿಗೆ ಕಾಡ್ತಿರುತ್ತದೆ.
ಖಿನ್ನತೆಗೊಳಗಾದ ವ್ಯಕ್ತಿಗೆ ನಕಾರಾತ್ಮಕ ಚಿಂತನೆ ಕಾಡುತ್ತಿರುತ್ತದೆ. ಪ್ರತಿಯೊಂದು ಮಾತನ್ನು ನೆಗೆಟಿವ್ ಆಗಿ ತೆಗೆದುಕೊಳ್ತಾನೆ.
ನಿದ್ರಾ ಹೀನತೆ. ಮಧ್ಯರಾತ್ರಿ ಎದ್ದು ಕುಳಿತುಕೊಳ್ಳುವುದು. ಸಂಪೂರ್ಣ ನಿದ್ರೆಯಾಗದಿರುವುದು ಕೂಡ ಖಿನ್ನತೆ ಲಕ್ಷಣ.
ಸುತ್ತಲೂ ಜನರಿದ್ದರೂ ಒಂಟಿತನ ಕಾಡುತ್ತದೆ. ಸದಾ ಒಬ್ಬಂಟಿಯಾಗಿರಲು ಬಯಸುತ್ತಾನೆ.
ದೀರ್ಘ ಸಮಯದ ಖಿನ್ನತೆಯಲ್ಲಿ ವ್ಯಕ್ತಿ ಆತ್ಮಹತ್ಯೆ ಬಗ್ಗೆ ಆಲೋಚನೆ ಮಾಡಲು ಶುರುಮಾಡ್ತಾನೆ.
ಇಂಥ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ಸ್ನೇಹಿತರು, ಕುಟುಂಬಸ್ಥರ ಜೊತೆ ಮಾತನಾಡಬೇಕು. ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.