ಎಲ್ಲರ ಅಡುಗೆ ಮನೆಯಲ್ಲೂ ಹೆಚ್ಚಾಗಿ ಇಂಗು ಇದ್ದೇ ಇರುತ್ತದೆ. ರಸಂ, ಸಾಂಬಾರು ಮಾಡಿದಾಗ ಇದರ ಒಗ್ಗರಣೆ ಇಲ್ಲದಿದ್ದರೆ ರುಚಿ ಕಳೆದುಕೊಳ್ಳುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಇದರಿಂದ ಆರೋಗ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು.
ಪ್ರತಿದಿನ 1 ಲೋಟ ಬೆಚ್ಚಗಿರುವ ನೀರಿಗೆ ½ ಚಮಚ ಇಂಗಿನ ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನವಿದೆ. ಇದು ಜೀರ್ಣಾಂಗದಲ್ಲಿರುವ ಎಲ್ಲಾ ಹಾನಿಕಾರಕ ಜೀವಾಣುಗಳನ್ನು ಹೊರಹಾಕುತ್ತದೆ. ಇದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ.
ಹಾಗೇ ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿಟ್ಟು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ಇದು ತಲೆಯ ರಕ್ತನಾಳಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಿ ತಲೆ ನೋವನ್ನು ದೂರಮಾಡುತ್ತದೆ.