ದಂಪತಿಗಳು ಖುಷಿಯಿಂದ ಕುಣಿದಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ನಿಮ್ಮ ತುಂಟಿಯಂಚಿನಲ್ಲೂ ನಗು ಬರಬಹುದು. ಪ್ರೇರಣಾ ಮಹೇಶ್ವರಿ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಮುದ್ದಾದ ವಿಡಿಯೋ ಖಂಡಿತಾ ನಿಮ್ಮ ದಿನ ಬೆಳಗಬಲ್ಲದು.
ಹೌದು, ಇದೀಗ ವೈರಲ್ ಆಗಿರೋ ವಿಡಿಯೋ ಖಂಡಿತಾ ನಿಮ್ಮ ಮನಗೆಲ್ಲುತ್ತದೆ. ಖಾಲಿ ರಸ್ತೆಯಲ್ಲಿ ಬೀದಿ ದೀಪದ ಕೆಳಗೆ ದಂಪತಿ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಟೆರೇಸ್ ನಲ್ಲಿ ನಿಂತವರು ದಂಪತಿ ಮಾಡಿರೋ ನೃತ್ಯವನ್ನು ಸೆರೆಹಿಡಿದಿದ್ದಾರೆ. ಯಾವುದೇ ಚಿಂತೆಯಿಲ್ಲದೆ ದಂಪತಿ ರಸ್ತೆಯಲ್ಲಿ ಬೊಂಬಾಟ್ ಆಗಿ ಹೆಜ್ಜೆ ಹಾಕಿದ್ದಾರೆ.
ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ನೆಟ್ಟಿಗರು ದಂಪತಿಗಳ ಈ ಅದ್ಭುತ ನೃತ್ಯಕ್ಕೆ ಮನಸೋತಿದ್ದಾರೆ. ಸಹಜವಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.