
ಸಾಮಾನ್ಯವಾಗಿ ಓದು ಅಥವಾ ಉದ್ಯೋಗಕ್ಕಾಗಿ ಮನೆಯಿಂದ ದೂರವಿರುವವರು ಪುಟ್ಟ ಬಾಡಿಗೆ ಮನೆ ಮಾಡಿಕೊಂಡು ರೂಮ್‌ಮೇಟ್‌ಗಳ ಜೊತೆಗೆ ವಾಸಿಸ್ತಾರೆ. ಆರಂಭದಲ್ಲಿ ರೂಮ್‌ಮೇಟ್ಸ್ ಆಗಿದ್ದವರು ನಂತರ ಬೆಸ್ಟ್ ಫ್ರೆಂಡ್ಸ್ ಆಗಿ ಬದಲಾಗ್ತಾರೆ.
ಇಲ್ಲೊಂದ್ಕಡೆ ರೂಮ್‌ಮೇಟ್ ಹುದ್ದೆ ಖಾಲಿ ಇದೆ ಅನ್ನೋ ಜಾಹೀರಾತು ಎಲ್ಲರ ಗಮನ ಸೆಳೆಯುತ್ತಿದೆ. ವ್ಯಕ್ತಿಯೊಬ್ಬ ತನಗೆ ರೂಮ್‌ಮೇಟ್ ಬೇಕೆಂದು ಜಾಹೀರಾತು ಕೊಟ್ಟಿದ್ದಾನೆ. ರಸ್ತೆ ಬದಿಗಳಲ್ಲೆಲ್ಲ ಜಾಹೀರಾತನ್ನು ಅಂಟಿಸಿದ್ದಾನೆ.
ಈತನ ಹೆಸರು ಓವನ್, ಇವನಿಗೆ 44 ವರ್ಷ. ತನ್ನ ಜೊತೆಗೆ ವಾಸಿಸಲು ಬೇಕಾಗಿರುವ ರೂಮ್‌ಮೇಟ್‌ಗೆ ಯಾವೆಲ್ಲ ಕ್ವಾಲಿಟಿ ಇರಬೇಕು ಅನ್ನೋದನ್ನೂ ಈತ ಜಾಹೀರಾತಿನಲ್ಲಿ ನಮೂದಿಸಿದ್ದಾನೆ.
ನಾನು ಒಂಟಿಯಾಗಿದ್ದೇನೆ, ನನಗೆ 18 ರಿಂದ 25 ವರ್ಷದ ಯುವತಿ ರೂಮ್‌ಮೇಟ್ ಆಗಿ ಬೇಕು ಅಂತ ಜಾಹೀರಾತಿನಲ್ಲಿ ತಿಳಿಸಿದ್ದಾನೆ. ಆಕೆ ಸಿಂಗಲ್ ಆಗಿರಬೇಕು, ಅವಳೇ ಮನೆಯನ್ನು ಸ್ವಚ್ಛಮಾಡಿ ಅಡುಗೆ ಕೂಡ ರೆಡಿ ಮಾಡ್ಬೇಕು ಅಂತ ಷರತ್ತು ಹಾಕಿದ್ದಾನೆ.
ಆ ಮನೆಯಲ್ಲಿ ಕೇವಲ 1 ಮಲಗುವ ಕೋಣೆ ಇದೆಯಂತೆ. ಇದರರ್ಥ ಯುವತಿ ಕೂಡ ಆತನ ರೂಮಿನಲ್ಲೇ ಮಲಬೇಕಾಗಿ ಬರುತ್ತದೆ. ಸ್ವಲ್ಪದಿನ ಬೇಕಾದ್ರೆ ಆರಾಮಾಗಿ ಕೌಚ್‌ನಲ್ಲಿ ಮಲಗಬಹುದು ಅಂತಾನೂ ಬರೆದಿದ್ದಾನೆ ಈತ.
ಅಷ್ಟೇ ಅಲ್ಲ ರೂಮ್‌ಮೇಟ್ ಆಗಿ ಬರುವವರು ಬಾತ್‌ರೂಮಿಗೆ ಹೋಗುವಾಗ್ಲೂ ಬಾಗಿಲು ಮುಚ್ಚುವಂತಿಲ್ಲ. ಇದು ಅವನ ಪಾಲಿಸಿಯಂತೆ, ತಿಂಗಳಿಗೆ 400 ಡಾಲರ್ ಬಾಡಿಗೆ ಹಣವನ್ನೂ ರೂಮ್‌ಮೇಟ್ ಕೊಡಬೇಕು. ಇಂಥಾ ಅಸಹ್ಯಕರ ಷರತ್ತು ವಿಧಿಸಿರೋ ಓವನ್‌ಗೆ ಜನರು ಟ್ರೋಲ್ ಕೂಡ ಮಾಡಿದ್ದಾರೆ.