ಕುಟುಂಬಸ್ಥರಿಗೆ ಖಾಯಿಲೆ ಹಾಗೂ ಆರ್ಥಿಕ ಸಮಸ್ಯೆ ಕಾಡ್ತಾ ಇದ್ದರೆ ಅದಕ್ಕೆ ವಾಸ್ತುದೋಷ ಕೂಡ ಒಂದು ಕಾರಣ. ಮುಖ್ಯ ದ್ವಾರದ ಮುಂದಿರುವ ಕೆಲವೊಂದು ವಸ್ತುಗಳು ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡಲು ಕಾರಣವಾಗುತ್ತದೆ. ಮನೆಯ ಸುತ್ತಮುತ್ತಲಿರುವ ವಾತಾವರಣ ಕೂಡ ಮನೆಯ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ.
ಮನೆಯ ಮುಖ್ಯ ದ್ವಾರದ ಬಳಿ ದೇವಸ್ಥಾನವಿದ್ದರೆ ಮನೆಯಲ್ಲಿ ದೇವರು ನೆಲೆಸುವುದಿಲ್ಲ. ದರಿದ್ರತೆ ಹಾಗೂ ರೋಗ, ಮನೆ ಪ್ರವೇಶ ಮಾಡುತ್ತದೆ.
ಮನೆಯ ಮುಖ್ಯ ದ್ವಾರದ ಬಳಿ ಮರ ಅಥವಾ ಕಂಬವಿದ್ದರೆ ಮನೆಯ ಮಕ್ಕಳಿಗೆ ಒಂದಲ್ಲ ಒಂದು ದುಃಖ ಕಾಡುತ್ತದೆ. ಅವರು ಶಾಂತಿಯಿಂದ ಜೀವನ ನಡೆಸುವುದು ಸಾಧ್ಯವಾಗುವುದಿಲ್ಲ. ನಿಮ್ಮ ಮನೆ ಮುಂದೆ ಕಂಬ ಅಥವಾ ಮರವಿದ್ದರೆ ಪ್ರತಿದಿನ ಮನೆ ಮುಂದೆ ಸ್ವಸ್ತಿಕ್ ಅಥವಾ ಓಂ ಚಿಹ್ನೆಯನ್ನು ಬಿಡಿಸಿ.
ಮನೆಗೆ ಅದೃಷ್ಟ ಆಮಂತ್ರಿಸಲು ಮನೆ ಮುಂದೆ ರಂಗೋಲಿ ಬಿಡಿಸಬೇಕು.
ಮನೆಯ ಮುಖ್ಯ ದ್ವಾರದ ಬಳಿ ಚಪ್ಪಲಿ ಬಿಡಬಾರದು. ಹಾಗೆಯೇ ಮುಖ್ಯದ್ವಾರದ ಬಾಗಿಲಿನ ಹಿಂದೆಯೂ ಚಪ್ಪಲಿ ಇಡಬಾರದು.
ಮನೆಯ ಮುಖ್ಯದ್ವಾರದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಿ. ಸ್ವಚ್ಛತೆ ಇಲ್ಲವಾದ್ರೆ ಧನಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.