alex Certify ಖಾತೆಗೆ ಬಂತು‌ ಲಕ್ಷ ಲಕ್ಷ ಹಣ; ಆದರೆ ದುಡ್ಡೆಲ್ಲಾ ಹೋಗಿದ್ದು ಮಾತ್ರ ಹ್ಯಾಕರ್ ಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾತೆಗೆ ಬಂತು‌ ಲಕ್ಷ ಲಕ್ಷ ಹಣ; ಆದರೆ ದುಡ್ಡೆಲ್ಲಾ ಹೋಗಿದ್ದು ಮಾತ್ರ ಹ್ಯಾಕರ್ ಗೆ..!

ಬೆಂಗಳೂರು- ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳಿಂದ ಸ್ಮಾರ್ಟ್ ಫೋನ್ ಬಳಸುವವರಿಗೆ ದೊಡ್ಡ ಸಮಸ್ಯೆ ಉಂಟಾಗ್ತಾ ಇದೆ. ಈ ಹ್ಯಾಕರ್ ಗಳಿಂದ ಹೇಗೆ ಬಚಾವಾಗೋದು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ದಿನಕ್ಕೆ ಒಂದಲ್ಲ ಒಂದು ಕೇಸ್ ಸೈಬರ್ ಕ್ರೈಂ ಗೆ ಈ ರೀತಿಯ ದೂರುಗಳು ಬರುತ್ತಲೇ ಇವೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಇಂಥದ್ದೇ ಕೇಸ್ ಒಂದು ದಾಖಲಾಗಿದೆ.

ಆತ ಲೋನ್ ಪಡೆಯದೇ ಇದ್ದರೂ ಆತನ ಖಾತೆಗೆ ಬ್ಯಾಂಕ್ ನಿಂದ ಲಕ್ಷ ಲಕ್ಷ ಹಣ ಬಂದಿದೆ. ಬಂದ ಕೆಲವೇ ನಿಮಿಷಗಳಲ್ಲಿ ಸುಮಾರು 8 ಲಕ್ಷ ಹಣ ಹ್ಯಾಕರ್ ಖಾತೆಗೆ ಹೋಗಿದೆ. ಉಳಿದ ಹಣ ಹೋಗೋ ಅಷ್ಟರಲ್ಲಿ ಅವರು ಬುದ್ಧಿವಂತಿಕೆ ಉಪಯೋಗಿಸಿ ಖಾತೆ ಬ್ಲಾಕ್ ಮಾಡಿದ್ದಾರೆ‌. ಹೀಗಾಗಿ ಉಳಿದ ಹಣ ಹಾಗೇ ಇದೆ. ಇನ್ನು ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ.

ಹ್ಯಾಕರ್‌ಗಳು ವ್ಯಕ್ತಿಯ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿದ್ದಾರೆ. ಈ ಮೂಲಕವೇ 23 ಲಕ್ಷ ಲೋನ್ ಪಡೆದಿದ್ದಾರೆ. ಆ ಲೋನ್ ಹಣ ಇವರ ಅಕೌಂಟ್‌ಗೆ ಜಮೆಯಾದ ತಕ್ಷಣವೇ ಸಂಪೂರ್ಣ ಹಣವನ್ನು ತಮ್ಮ ಅಕೌಂಟ್‌ಗೆ ಹಾಕಿಕೊಳ್ಳಲು ಪ್ರಯತ್ನ‌ಮಾಡಿದ್ದಾರೆ. ಇನ್ನೂ ಈ ಪ್ರಕರಣವನ್ನು ಪೊಲೀಸರು ಸ್ಮಾರ್ಟ್‌ಫೋನ್ ಮಿರರ್ ಹ್ಯಾಕಿಂಗ್ ಎಂದು ಊಹಿಸಿದ್ದಾರೆ. ಸದ್ಯ ಈ ಲೋನ್ ಅಮೌಂಟ್ 23 ಲಕ್ಷವನ್ನು ಆ ವ್ಯಕ್ತಿಯೇ ತೀರಿಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...