ಕೈ ತುಂಬ ಸಂಬಳ ಬರುತ್ತೆ ಆದ್ರೆ ಮನೆಯಲ್ಲಿ ಲಕ್ಷ್ಮಿ ಮಾತ್ರ ನೆಲೆಸೋದಿಲ್ಲ. ಬಂದ ಸಂಬಳವೆಲ್ಲ ಸಾಲ ತೀರಿಸಲು ಖರ್ಚಾಗುತ್ತದೆ. ಮತ್ತೆ ತಿಂಗಳ ಕೊನೆಯಲ್ಲಿ ಸಾಲ ಮಾಡಬೇಕಾಗುತ್ತದೆ ಅಂತಾ ಅನೇಕರು ಗೊಣಗುತ್ತಿರುತ್ತಾರೆ. ಧನ ಹಾನಿ ಹಾಗೂ ಖರ್ಚು ಹೆಚ್ಚಾಗಲು ವಾಸ್ತು ದೋಷ ಕೂಡ ಒಂದು ಕಾರಣ.
ಮನೆಯ ಈಶಾನ್ಯ ದಿಕ್ಕು ಹಾಗೂ ಉತ್ತರ ದಿಕ್ಕು ಆರ್ಥಿಕ ಉನ್ನತಿಗೆ ಕಾರಣವಾಗುತ್ತವೆ. ಈ ದಿಕ್ಕಿನಲ್ಲಿ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಮನೆಯ ಈಶಾನ್ಯ ಹಾಗೂ ಉತ್ತರ ದಿಕ್ಕಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕು ಶುಭಕರ. ಇಲ್ಲಿ ಮಾತೆ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕೊಳಕು ಇಡಬಾರದು. ಈಶಾನ್ಯ ದಿಕ್ಕು ಕೊಳಕಾಗಿದ್ದರೆ ಆ ಮನೆಯಲ್ಲಿ ಸದಾ ಆರ್ಥಿಕ ಸಮಸ್ಯೆ ಕಾಡುತ್ತದೆ.
ಮನೆಯ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಭಾರೀ ಗಾತ್ರದ ವಸ್ತುಗಳನ್ನು ಇಡಬಾರದು. ಈ ದಿಕ್ಕಿನಲ್ಲಿ ಹೆಚ್ಚು ವಸ್ತುವಿದ್ರೆ ಸಾಲ ಹೆಚ್ಚಾಗುತ್ತದೆ.
ಮನೆಯಲ್ಲಿ ನೀರಿನ ಟ್ಯಾಂಕ್ ಈಶಾನ್ಯ ದಿಕ್ಕಿನಲ್ಲಿರಬೇಕು. ಇದ್ರಿಂದ ಖರ್ಚು ಕಡಿಮೆಯಾಗುತ್ತದೆ.
ಸದಾ ಮನೆ ತ್ರಿಜೋರಿ ದಕ್ಷಿಣ ದಿಕ್ಕಿಗಿರಬೇಕು. ಅದ್ರ ಮುಖ ಉತ್ತರ ದಿಕ್ಕಿಗಿರಬೇಕು. ಇಲ್ಲವಾದ್ರೆ ಖರ್ಚು ಹೆಚ್ಚಾಗುತ್ತದೆ.