ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರ್ಸ್ ಸದಾ ತುಂಬಿರಲಿ ಎಂದು ಬಯಸುತ್ತಾನೆ. ಇದಕ್ಕಾಗಿ ದೈವಿಕ ಪೂಜೆ ಪುನಸ್ಕಾರಗಳ ಜೊತೆಗೆ ಏನೆಲ್ಲ ಕಸರತ್ತುಗಳನ್ನು ಮಾಡ್ತಾನೆ. ಆದ್ರೂ ಖಜಾನೆ ತುಂಬದೆ ಹೋದ್ರೆ ಈ ರೀತಿ ಮಾಡಿ. ಈ ವಿಧಾನ ಅನುಸರಿಸಲು ಜಾಸ್ತಿ ಖರ್ಚಾಗುವುದಿಲ್ಲ. ಜೊತೆಗೆ ಖಜಾನೆ ಕೂಡ ತುಂಬುತ್ತದೆ.
ಪುರಾಣಗಳ ಪ್ರಕಾರ ದೇವರಿಗೆ ಅಡಿಕೆ ಎಂದ್ರೆ ಪ್ರೀತಿ. ಅದರಲ್ಲೂ ಗಣೇಶ ಹಾಗೂ ದೇವಿ ಲಕ್ಷ್ಮಿಗೆ ಅಡಿಕೆ ಅಂದ್ರೆ ಬಹಳ ಪ್ರೀತಿ. ಅಡಿಕೆ ಲಾಭ ಹಾಗೂ ಸೌಭಾಗ್ಯದ ಸಂಕೇತ. ಹಾಗಾಗಿ ಮನೆ ಹಾಗೂ ಅಂಗಡಿಯ ಕಪಾಟಿನಲ್ಲಿ ಒಂದು ಅಡಿಕೆ ಇಡುವುದರಿಂದ ಖಜಾನೆ ತುಂಬಿರುತ್ತದೆ. ಒಂದು ಅಡಿಕೆಯ ಬೆಲೆ ಎರಡರಿಂದ ಮೂರು ರೂಪಾಯಿ ಇರಬಹುದು. ಆದ್ರೆ ಇದನ್ನು ಇಡುವುದರಿಂದ ಕಪಾಟು ಹಣದಿಂದ ತುಂಬಿರುತ್ತದೆ.
ಕಪಾಟಿನಲ್ಲಿ ಒಂದು ಅಡಿಕೆ ಇಡುವುದರಿಂದ ಹಣದ ಕೊರತೆ ಎಂದೂ ಎದುರಾಗುವುದಿಲ್ಲ. ದೀಪಾವಳಿಯ ದಿನ ಅಡಿಕೆಗೆ ಕೆಂಪು ದಾರವನ್ನು ಸುತ್ತಿ, ಕುಂಕುಮ, ಹೂಗಳಿಂದ ಪೂಜೆ ಮಾಡಿ, ಕಪಾಟಿನಲ್ಲಿಟ್ಟರೆ ಮನೆಯಲ್ಲಿ ಸಂಪತ್ತು ನೆಲೆಸುತ್ತದೆ.
ಗೌರಿ-ಗಣೇಶನೆಂದು ಪರಿಗಣಿಸಿ ಪೂಜೆ ವೇಳೆ ಅಡಿಕೆ ಮೇಲೆ ಜನಿವಾರವಿಡಿ.ನಂತರ ಅದನ್ನು ಖಜಾನೆಯಲ್ಲಿಡಿ.ಧನಲಕ್ಷ್ಮಿ ಸದಾ ನಿಮ್ಮ ಬಳಿಯೇ ಇರುವಂತಾಗುತ್ತದೆ.