ಚಂಡೀಗಢ: ತೀವ್ರ ವಾಗ್ವಾದದ ನಂತರ ಯುವಕನೊಬ್ಬನನ್ನು ಕಾರಿನ ಚಾಲಕ ತನ್ನ ಬಾನೆಟ್ ನಲ್ಲಿ ಎಳೆದೊಯ್ದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್ನ ಚಂಡೀಗಢದಲ್ಲಿ ನಡೆದಿದೆ.
ಆರೋಪಿಯನ್ನು ಬಿಎಂಡಬ್ಲ್ಯು ಸವಾರ ನವನ್ಶಹರ್ನ ಬಂಗಾ ನಿವಾಸಿ ಸ್ವಪನ್ ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. 24 ವರ್ಷದ ಶುಭಂ ಎಂಬ ಯುವಕನನ್ನು ಕಾರಿನ ಬಾನೆಟ್ಗೆ ಎಳೆದೊಯ್ದು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇಡೀ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಆರೋಪಿ ಸ್ವಪನ್ ಪ್ರೀತ್ ಸಿಂಗ್ ನನ್ನು ಬಂಧಿಸಿದ್ದಾರೆ. ಆತನ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ವಿರುದ್ಧ ಸೆಕ್ಟರ್ 17 ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿ ಪ್ರಕಾರ, ಶುಭಂ ತನ್ನ ಸ್ನೇಹಿತರೊಂದಿಗೆ ಕ್ಯಾಬ್ ಬುಕ್ ಮಾಡಲು ಕಾಯುತ್ತಿದ್ದರು. ಈ ವೇಳೆ ಅಚಾನಕ್ಕಾಗಿ ಕಾರೊಂದು ಬಂದು ಶುಭಂ ಅವರ ಕಾಲಿಗೆ ತಾಗಿದೆ. ಇದರಿಂದ ಶುಭಂ ಬಿಎಂಡಬ್ಲ್ಯು ಚಾಲಕನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ತನ್ನ ವಾಹನವನ್ನು ಸ್ಟಾರ್ಟ್ ಮಾಡಿ ಶುಭಂನತ್ತ ಕಾರನ್ನು ಚಲಾಯಿಸಿ ಎಳೆದೊಯ್ದಿದ್ದಾನೆ. ಘಟನೆಯಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಶುಭಂನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.